ADVERTISEMENT

ಹಾಂಗ್‌ಕಾಂಗ್‌ಗೆ ಫಿಫಾ ದಂಡ

ಏಜೆನ್ಸೀಸ್
Published 9 ಅಕ್ಟೋಬರ್ 2019, 18:34 IST
Last Updated 9 ಅಕ್ಟೋಬರ್ 2019, 18:34 IST

ಲಾಸೇನ್‌: ಇರಾನ್‌ ವಿರುದ್ಧ ವಿಶ್ವಕಪ್‌ ಅರ್ಹತಾ ಪಂದ್ಯಕ್ಕೆ ಮುನ್ನ ಚೀನಾದ ರಾಷ್ಟ್ರಗೀತೆ ನುಡಿಸುವ ಸಂದರ್ಭದಲ್ಲಿ ಸ್ಥಳೀಯರು ಕೂಗೆಬ್ಬಿಸಿ ಶಿಳ್ಳೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಹಾಂಗ್‌ಕಾಂಗ್‌ ಫುಟ್‌ಬಾಲ್‌ ಫೆಡರೇಷನ್‌ಗೆ ಫಿಫಾ ಶಿಸ್ತು ಆಯೋಗ ಬುಧವಾರ ₹ 10.68 ಲಕ್ಷ (13,700 ಯೂರೊ) ದಂಡ ವಿಧಿಸಿದೆ.

ಸೆ. 10ರಂದು ಈ ಪಂದ್ಯ ನಡೆದಿದ್ದು, ಆತಿಥೇಯ ಹಾಂಗ್‌ಕಾಂಗ್‌ 0–2 ರಿಂದ ಇರಾನ್‌ಗೆ ಮಣಿದಿತ್ತು.

ಹಾಂಗ್‌ಕಾಂಗ್‌ ಸ್ವತಂತ್ರ ತಂಡ ಕಣಕ್ಕಿಳಿಸುತ್ತಿದೆ. ಆದರೆ ಅದು ಚೀನಾದ ಆಡಳಿತಾತ್ಮಕ ಭಾಗವಾಗಿರುವ ಕಾರಣ ಚೀನಾ ರಾಷ್ಟ್ರಗೀತೆ ನುಡಿಸಲಾಗುತಿತ್ತು. ಹಾಂಗ್‌ಕಾಂಗ್‌ನಲ್ಲಿ ಚೀನಾ ವಿರುದ್ಧ ಕೆಲಸಮಯದಿಂದ ಪ್ರತಿಭಟನೆ ನಡೆಯುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.