ADVERTISEMENT

FIFA 2022- ಬೇಕೇ ಬೇಕು ಬಿಯರ್‌ ಬೇಕು: ಮೈದಾನದಲ್ಲಿ ಈಕ್ವೆಡಾರ್‌ ಅಭಿಮಾನಿಗಳ ಕೂಗು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2022, 6:34 IST
Last Updated 21 ನವೆಂಬರ್ 2022, 6:34 IST
ಕತಾರ್‌ ಹಾಗೂ ಈಕ್ವೆಡಾರ್ ನಡುವಣ ಪಂದ್ಯದ ನೋಟ (ಪಿಟಿಐ ಚಿತ್ರ)
ಕತಾರ್‌ ಹಾಗೂ ಈಕ್ವೆಡಾರ್ ನಡುವಣ ಪಂದ್ಯದ ನೋಟ (ಪಿಟಿಐ ಚಿತ್ರ)   

ಬೆಂಗಳೂರು: ಕತಾರ್‌ ಹಾಗೂ ಈಕ್ವೆಡಾರ್‌ ನಡುವಣ ಫಿಫಾ ಫುಟ್‌ಬಾಲ್‌ ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಈಕ್ವೆಡಾರ್ ಅಭಿಮಾನಿಗಳು ‘ನಮಗೆ ಬಿಯರ್‌ ಬೇಕು‘ ಎಂದು ಘೋಷಣೆ ಮೊಳಗಿಸಿದ್ದಾರೆ.

ವಿಶ್ವಕಪ್‌ ಪಂದ್ಯಗಳು ನಡೆಯುವ ಎಂಟು ಮೈದಾನಗಳಲ್ಲಿ ಬಿಯರ್‌ ಮಾರಾಟಕ್ಕೆ ಕತಾರ್ ಸರ್ಕಾರ ನಿಷೇಧ ಹೇರಿದೆ. ಇದನ್ನು ವಿರೋಧಿಸಿ, ಪಂದ್ಯ ವೀಕ್ಷಣೆಗೆ ಬಂದಿದ್ದ ಈಕ್ವೆಡಾರ್‌ ಅಭಿಮಾನಿಗಳು ‘ನಮಗೆ ಬಿಯರ್‌ ಬೇಕು, ನಮಗೆ ಬಿಯರ್ ಬೇಕು‘ ಎಂದು ಕೂಗಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಹರಿದಾಡುತ್ತಿದೆ.

ADVERTISEMENT

ವಿಶ್ವಕಪ್‌ ಆರಂಭಕ್ಕೆ ಇನ್ನೆನು ಎರಡು ದಿನ ಇದೆ ಎನ್ನುವ ವೇಳೆಗೆ, ಪಂದ್ಯ ನಡೆಯುವ ಮೈದಾನದಹಗಳಲ್ಲಿ ಬಿಯರ್‌ ಮಾರಾಟವನ್ನು ಕತಾರ್‌ ಸರ್ಕಾರ ನಿಷೇಧ ಮಾಡಿತ್ತು.

ಇಸ್ಲಾಮಿಕ್‌ ರಾಷ್ಟ್ರ ಕತಾರ್‌ನಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದೆ. ಫಿಪಾ ಆಯೋಜನೆಗಾಗಿ ಅದನ್ನು ಸಡಿಲಗೊಳಿಸುವುದಾಗಿ ಕತಾರ್‌ ಹೇಳಿತ್ತು. ಆದರೆ ವಿಶ್ವಕಪ್‌ ಆರಂಭಕ್ಕೆ ಎರಡು ದಿನ ಇರುವಾಗ, ಮೈದಾನದಲ್ಲಿ ಬಿಯರ್‌ ಮಾರಾಟಕ್ಕೆ ನಿಷೇಧ ಹೇರಿತ್ತು.

ಇದು ಫುಟ್‌ಬಾಲ್‌ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಮೂಲಗಳ ಪ್ರಕಾರ ಫ್ಯಾನ್‌ ಜೋನ್ ಹಾಗೂ ಸ್ಟೇಡಿಯಂನ ಆತಿಥ್ಯ ಬಾಕ್ಸ್‌ಗಳಲ್ಲಿ ಮಾತ್ರ ಮದ್ಯ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.