ADVERTISEMENT

ಎಂಟರ ಘಟ್ಟ; ತಾರೆಗಳ ತೋಟ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 20:54 IST
Last Updated 7 ಡಿಸೆಂಬರ್ 2022, 20:54 IST
ಕೊಡಿ ಗಾಕ್ಪೊ
ಕೊಡಿ ಗಾಕ್ಪೊ   

ಕತಾರ್‌ ದೇಶದ ಆತಿಥ್ಯದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿ ಹತ್ತಾರು ರೋಚಕ ಸಂಗತಿಗಳನ್ನು ದಾಖಲಿಸಿದೆ. ನವೆಂಬರ್ 20ರಿಂದ ಇಲ್ಲಿಯವರೆಗೆ ನಡೆದ ಒಟ್ಟು 56 ಪಂದ್ಯಗಳಲ್ಲಿಯೂ ಒಂದಿಲ್ಲೊಂದು ವಿಶೇಷಗಳಿದ್ದವು. ಏಷ್ಯಾ ಖಂಡದ ತಂಡಗಳೂ ಈ ಬಾರಿ ತಮ್ಮ ಶಕ್ತಿ ಮೆರೆದವು. ಅದರಲ್ಲೂ ಜಪಾನ್, ದಕ್ಷಿಣ ಕೋರಿಯಾ ಮತ್ತು ಸೌದಿ ಅರೇಬಿಯಾ ತಂಡಗಳು ವಿಶ್ವದ ಘಟಾನುಘಟಿ ತಂಡಗಳಿಗೇ ಸೋಲಿನ ಕಹಿ ಉಣಿಸಿದ್ದು ವಿಶೇಷ. ಈ ಎಲ್ಲ ಕ್ಲಿಷ್ಟ ಸವಾಲುಗಳನ್ನು ದಾಟಿಯೂ ಫುಟ್‌ಬಾಲ್ ಕ್ಷೇತ್ರದ ಸಮಕಾಲೀನ ದಿಗ್ಗಜ ಆಟಗಾರರು ಇರುವ ಪ್ರಮುಖ ತಂಡಗಳು ಎಂಟರ ಘಟ್ಟಕ್ಕೆ ಬಂದು ನಿಂತಿವೆ. ಹೋದ ಬಾರಿಯ ಚಾಂಪಿಯನ್ ಫ್ರಾನ್ಸ್‌, ರನ್ನರ್ಸ್ ಅಪ್ ಕ್ರೊವೇಷ್ಯಾ, ಬ್ರೆಜಿಲ್, ಅರ್ಜೆಂಟೀನಾ, ಮೊರಕ್ಕೊ, ಪೋರ್ಚುಗಲ್, ಇಂಗ್ಲೆಂಡ್ ಮತ್ತು ನೆದರ್ಲೆಂಡ್ಸ್‌ ತಂಡಗಳು ತಮ್ಮ ಸಾಮರ್ಥ್ಯವನ್ನು ಪಣಕ್ಕೊಡ್ಡಲಿವೆ. ಈ ಎಲ್ಲ ತಂಡಗಳ ತಾರಾಮಣಿಗಳು ಇಲ್ಲಿ ಕಂಗೊಳಿಸಲು ಸಿದ್ಧರಾಗಿದ್ದಾರೆ.

ಅದರಲ್ಲೂ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಮತ್ತು ಪೋರ್ಚುಗಲ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಬಹುತೇಕ ಇದು ಕೊನೆಯ ವಿಶ್ವಕಪ್ ಟೂರ್ನಿಯಾಗಿದೆ. ಒಂದೊಮ್ಮೆ ಈ ಎರಡೂ ತಂಡಗಳೂ ಕ್ವಾರ್ಟರ್‌ಫೈನಲ್ ಮತ್ತು ಸೆಮಿಫೈನಲ್‌ಗಳಲ್ಲಿ ಜಯಿಸಿದರೆ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಸಮಕಾಲೀನ ಫುಟ್‌ಬಾಲ್ ರಂಗದ ‘ಸಾರ್ವಕಾಲಿಕ ಶ್ರೇಷ್ಠ’ ಆಟಗಾರರಿಬ್ಬರ ಹಣಾಹಣಿ ನಡೆಯಲಿ ಎಂದು ಫುಟ್‌ಬಾಲ್ ಪ್ರೇಮಿಗಳು ಆಶಿಸುತ್ತಿದ್ದಾರೆ. ಈ ಎಂಟು ತಂಡಗಳಲ್ಲಿರುವ ತಾರಾವರ್ಚಸ್ಸಿನ ಆಟಗಾರರು ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೆ ಮಾಡಿರುವ ಸಾಧನೆ ಇಲ್ಲಿದೆ;

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT