ADVERTISEMENT

ನೈಜೀರಿಯಾ ಫುಟ್‌ಬಾಲ್‌ ಆಟಗಾರ್ತಿಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 18:19 IST
Last Updated 23 ಜೂನ್ 2019, 18:19 IST

ಪ್ಯಾರಿಸ್‌ (ರಾಯಿಟರ್ಸ್‌): ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಿಂದ ಹೊರಬಿದ್ದ ನಂತರ ನೈಜೀರಿಯಾ ಆಟಗಾರ್ತಿಯರು ಹೋಟೆಲ್‌ನಲ್ಲಿ ಭಾನುವಾರ ಪ್ರತಿಭಟನೆ ಆರಂಭಿಸಿದ್ದಾರೆ. ದೇಶದ ಫುಟ್‌ಬಾಲ್‌ ಫೆಡರನೇಷನ್‌ ತಮಗೆ ಬಾಕಿವುಳಿಸಿರುವ ಬೋನಸ್‌ ಹಣವನ್ನು ಪಾವತಿಸಬೇಕೆಂದು ಪಟ್ಟುಹಿಡಿದಿದ್ದಾರೆ.

ಎರಡು ಬಾರಿಯ ಚಾಂಪಿಯನ್‌ ಜರ್ಮನಿ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿ 3–0 ಗೋಲುಗಳಿಂದ ನೈಜೀರಿಯಾ ತಂಡವನ್ನು ಸೋಲಿಸಿ ಎಂಟರ ಘಟ್ಟ ತಲುಪಿತ್ತು.

ಇದಾದ ಕೆಲವೇ ಹೊತ್ತಿನಲ್ಲಿ ನೈಜೀರಿಯಾ ಆಟಗಾರ್ತಿಯರು, ತಾವು ಇಳಿದುಕೊಂಡಿದ್ದ ಹೋಟೆಲ್‌ನಲ್ಲಿ ಧರಣಿ ಕುಳಿತರು. ಮೂರು ವರ್ಷಗಳ ಅವಧಿಯಲ್ಲಿ ತಮಗೆ ಬರಬೇಕಾದ 6,537 ಡಾಲರ್‌ (₹ 4.57 ಲಕ್ಷ) ಪಾವತಿ ಮಾಡಬೇಕೆಂದು ಪಟ್ಟುಹಿಡಿದರು. ಕೇವಲ ಅರ್ಧದಷ್ಟು ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.