ADVERTISEMENT

ಅಮೆರಿಕಾ ತಂಡಕ್ಕೆ ದಾಖಲೆ ಗೆಲುವು

ಮಹಿಳಾ ವಿಶ್ವಕಪ್‌: ಪ್ರಶಸ್ತಿ ಉಳಿಸಿಕೊಳ್ಳುವತ್ತ ಚಾಂಪಿಯನ್‌ ಚಿತ್ತ

ಏಜೆನ್ಸೀಸ್
Published 12 ಜೂನ್ 2019, 17:31 IST
Last Updated 12 ಜೂನ್ 2019, 17:31 IST
ಅಮೆರಿಕಾ ಆಟಗಾರ್ತಿಯರು ಸಂಭ್ರಮಿಸಿದ ಪರಿ – ರಾಯಿಟರ್ಸ್‌ ಚಿತ್ರ
ಅಮೆರಿಕಾ ಆಟಗಾರ್ತಿಯರು ಸಂಭ್ರಮಿಸಿದ ಪರಿ – ರಾಯಿಟರ್ಸ್‌ ಚಿತ್ರ   

ಪ್ಯಾರಿಸ್‌: ಹಾಲಿ ಚಾಂಪಿಯನ್‌ ಅಮೆರಿಕಾ ತಂಡ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಥಾಯ್ಲೆಂಡ್‌ ತಂಡವನ್ನು 13–0 ಗೋಲುಗಳಿಂದ ಅಮೆರಿಕಾ ಮಣಿಸಿತು.ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಇದು ಗರಿಷ್ಠ ಅಂತರದ ಜಯ.

2007ರಲ್ಲಿ ಜರ್ಮನಿ ತಂಡವು ಅರ್ಜೆಂಟೀನಾ ವಿರುದ್ಧ 11–0 ಗೋಲುಗಳಿಂದ ಗೆದ್ದಿತ್ತು. ಈ ಪಂದ್ಯದಲ್ಲಿ ಅಮೆರಿಕಾ ತನ್ನ ಹಿಂದಿನ 7–0 ಗೆಲುವಿನ ದಾಖಲೆಯನ್ನು ಉತ್ತಮಪಡಿಸಿಕೊಂಡಿತು.

ರೇಮ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚಾಂಪಿಯನ್‌ ತಂಡವು ಪ್ರಥಮಾರ್ಧದಲ್ಲೇ 10 ಗೋಲು ಗಳಿಸಿ ಪಾರಮ್ಯ ಮೆರೆಯಿತು. ಅಮೆರಿಕಾ ಪರ ತಾರಾ ಆಟಗಾರ್ತಿ ಅಲೆಕ್ಸ್‌ ಮಾರ್ಗನ್‌ ಅವರು ಐದು ಗೋಲು ಬಾರಿಸಿ ಗಮನಸೆಳೆದರು. ರೋಸ್‌ ಲಾವೆಲ್ಲಾ ಹಾಗೂ ಸಮಂತಾ ಮೆವಿಸ್‌ ತಲಾ ಎರಡು ಗೋಲುಗಳ ಕೊಡುಗೆ ನೀಡಿದರು.

ADVERTISEMENT

ಲಿಂಡ್ಸೆ ಹೊರಾನ್, ಮೆಗನ್‌ ರ‍್ಯಾಪಿನೊ, ಮ್ಯಾಲೊರಿ ಪುಗ್‌, ಕಾರ್ಲಿ ಲಾಯ್ಡ್‌ ತಲಾ ಒಂದು ಗೋಲು ಹೊಡೆದರು. ಮತ್ತೊಂದು ಪಂದ್ಯದಲ್ಲಿ ಸ್ವೀಡನ್‌ ತಂಡ ಚಿಲಿ ವಿರುದ್ಧ 2–0 ಅಂತರದಿಂದ ಜಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.