ADVERTISEMENT

ಫುಟ್‌ಬಾಲ್‌: ಐಟಿ, ಎಜಒಆರ್‌ಸಿ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 20:25 IST
Last Updated 4 ನವೆಂಬರ್ 2018, 20:25 IST
ಜವಾಹರ್‌ ಯೂನಿಯನ್‌ನ ಫಾಸಿಲ್ (ಎಡ) ಅವರಿಂದ ಚೆಂಡು ಕಸಿದುಕೊಳ್ಳಲು ಬೆಂಗಳೂರು ಇಂಡಿಪೆಂಡೆನ್ಸ್ ತಂಡದ ಸುರೇಂದ್ರ (ಬಲ) ಪ್ರಯತ್ನಿಸಿದ ಸಂದರ್ಭ –ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್‌
ಜವಾಹರ್‌ ಯೂನಿಯನ್‌ನ ಫಾಸಿಲ್ (ಎಡ) ಅವರಿಂದ ಚೆಂಡು ಕಸಿದುಕೊಳ್ಳಲು ಬೆಂಗಳೂರು ಇಂಡಿಪೆಂಡೆನ್ಸ್ ತಂಡದ ಸುರೇಂದ್ರ (ಬಲ) ಪ್ರಯತ್ನಿಸಿದ ಸಂದರ್ಭ –ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್‌   

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಮತ್ತು ಎಜಿಒಆರ್‌ಸಿ ತಂಡಗಳು ಬಿಡಿಎಫ್‌ಎ ಆಶ್ರಯದ ಜಾರ್ಜ್‌ ಹೋವರ್ ಕಪ್‌ ’ಎ’ ಡಿವಿಷನ್ ಪಂದ್ಯವನ್ನು ಡ್ರಾ ಮಾಡಿಕೊಂಡವು. ಅಶೋಕನಗರದ ಬೆಂಗಳೂರು ಫುಟ್‌ಬಾಲ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಒಂದೊಂದು ಗೋಲು ಗಳಿಸಿದವು.

ಆದಾಯ ತೆರಿಗೆ ಇಲಾಖೆಯ ಪರ ಸುಜಿತ್‌ 40ನೇ ನಿಮಿಷದಲ್ಲಿ ಗೋಲು ಗಳಿಸಿದರೆ ಎದುರಾಳಿ ತಂಡಕ್ಕಾಗಿ ಪ್ರದೀಪ್‌ ಕುಮಾರ್ 51ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ಇದೇ ಕ್ರೀಡಾಂಗಣದಲ್ಲಿ ನಡೆದ ಸೂಪರ್ ಡಿವಿಷನ್ ಪಂದ್ಯದಲ್ಲಿ ಬೆಂಗಳೂರು ಇಂಡಿಪೆಂಡೆನ್ಸ್‌ ಮತ್ತು ಜವಾಹರ್ ಯೂನಿಯನ್ ತಂಡಗಳು ಗೋಲು ರಹಿತ ಡ್ರಾ ಸಾಧಿಸಿದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.