ಬೆಂಗಳೂರು: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ (ಕೆಎಸ್ಎಫ್ಎ) ಆಶ್ರಯದಲ್ಲಿ ಮಹಿಳೆಯರ ‘ಎ’ ಡಿವಿಷನ್ ಫುಟ್ಬಾಲ್ ಲೀಗ್ ಇದೇ 5ರಿಂದ ಆರಂಭಗೊಂಡು 27ರವರೆಗೆ ನಡೆಯಲಿದೆ.
ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು, ಒಟ್ಟು 8 ತಂಡಗಳು ಸೆಣಸಲಿವೆ. ಫೆ.5ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ಪಂದ್ಯದಲ್ಲಿ ಯುನೈಟೆಡ್ ಎಫ್ಸಿ ಕೊಡಗು ಮತ್ತು ಜಿಆರ್ಕೆ ಗರ್ಲ್ಸ್ ಎಫ್ಸಿ ಮುಖಾಮುಖಿಯಾಗಲಿವೆ. 10.30ಕ್ಕೆ ಯಂಗ್ಸ್ಟಾರ್ಸ್– ಸ್ಲಾಮ್ಜರ್ಸ್ ಎಫ್ಸಿ ತಂಡಗಳು ಸೆಣಸಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.