ಬೆಂಗಳೂರು: ಸ್ನೇಹಾ ಮತ್ತು ಎಸ್. ರೀನಾದೇವಿ ಅವರಿಬ್ಬರೂ ಸೇರಿ ಐದು ನಿಮಿಷಗಳ ಅಂತರದಲ್ಲಿ ಗಳಿಸಿದ ಮೂರು ಗೋಲುಗಳ ಬಲದಿಂದ ಶ್ರೀ ರೇಣುಕಾ ಫುಟ್‌ಬಾಲ್ ಕ್ಲಬ್ ತಂಡವು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಬಿ ಡಿವಿಷನ್ ಮಹಿಳೆಯರ ಲೀಗ್ ಚಾಂಪಿಯನ್‌ಷಿಪ್ ಪ್ರಶಸ್ತಿ ಜಯಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀರೇಣುಕಾ ತಂಡವು 3–2ರಿಂದ ಪಾಸ್ ಫುಟ್‌ಬಾಲ್ ಕ್ಲಬ್ ವಿರುದ್ಧ ಜಯಿಸಿತು.
ಪಾಸ್ ತಂಡದ ದೀಪಾ ರಾಮಚಂದ್ರನ್ (20ನೇ ನಿಮಿಷ) ಅವರು ಪಂದ್ಯದಲ್ಲಿ ಗೋಲು ಖಾತೆ ತೆರೆದರು. ರೇಣುಕಾ ತಂಡದ ಸ್ನೇಹಾ 40ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿದರು. ಐದು ನಿಮಿಷ ಕಳೆಯುವಷ್ಟರಲ್ಲಿ ರೀನಾದೇವಿ (44ನೇ ನಿ) ಗೋಲು ಹೊಡೆದರು. ನಂತರದ ನಿಮಿಷದಲ್ಲಿ ಸ್ನೇಹಾ ಕೂಡ ಇನ್ನೊಂದು ಗೋಲು ಗಳಿಸಿದರು. ಇದರಿಂದಾಗಿ 3–1ರ ಮುನ್ನಡೆ ಸಾಧ್ಯವಾಯಿತು. ಆದರೆ ಛಲಬಿಡದ ಪಾಸ್ ಎಫ್‌ಸಿಯ ಸೌಮ್ಯಾ ಕೆರ್ಕೆಟ್ಟಾ (48ನೇ ನಿ) ಗೋಲು ಗಳಿಸಿದರು.
ವಸುಂಧರಾ ಚವ್ಹಾಣ್ (ಶ್ರೀ ರೇಣುಕಾ ಎಫ್‌ಸಿ) ಅವರಿಗೆ ಉದಯೋನ್ಮುಖ ಆಟಗಾರ್ತಿ ಮತ್ತು ಪಾಸ್ ಎಫ್‌ಸಿಯ ಸಾಂಚಿ ರವಿಪಾಟಿ ಅವರಿಗೆ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.