ADVERTISEMENT

ಫುಟ್‌ಬಾಲ್‌: ಸಿಮ್ರನ್‌ ಮಿಂಚು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 21:19 IST
Last Updated 28 ಆಗಸ್ಟ್ 2022, 21:19 IST
ಎಂಇಜಿ ಸೆಂಟರ್ ಎಫ್‌ಸಿ ತಂಡದ ಅಮಾಲ್‌ ಎಂ. (ಎಡ) ಮತ್ತು ಎಫ್‌ಸಿ ಬೆಂಗಳೂರು ಯುನೈಟೆಡ್‌ನ ಮನ್‌ವೀರ್ ಸಿಂಗ್‌ ನಡುವೆ ಚೆಂಡಿಗಾಗಿ ಪೈಪೋಟಿ– ಪ್ರಜಾವಾಣಿ ಚಿತ್ರ
ಎಂಇಜಿ ಸೆಂಟರ್ ಎಫ್‌ಸಿ ತಂಡದ ಅಮಾಲ್‌ ಎಂ. (ಎಡ) ಮತ್ತು ಎಫ್‌ಸಿ ಬೆಂಗಳೂರು ಯುನೈಟೆಡ್‌ನ ಮನ್‌ವೀರ್ ಸಿಂಗ್‌ ನಡುವೆ ಚೆಂಡಿಗಾಗಿ ಪೈಪೋಟಿ– ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಿಮ್ರನ್‌ ಗುರುಂಗ್‌ ಗಳಿಸಿದ ಐದು ಗೋಲುಗಳ ಬಲದಿಂದ ಮಿಸಾಕಾ ಯುನೈಟೆಡ್‌ ಎಫ್‌ಸಿ ತಂಡವು ಕರ್ನಾಟಕ ವಿಮೆನ್ಸ್ ಲೀಗ್‌ ಫುಟ್‌ಬಾಲ್ ಟೂರ್ನಿಯಲ್ಲಿ ಜಯ ದಾಖಲಿಸಿತು.

ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ ಮಿಸಾಕಾ 9–0ಯಿಂದ ರೆಬೆಲ್ಸ್ ವಿಮೆನ್ಸ್ ಎಫ್‌ಸಿ ಎದುರು ಗೆದ್ದಿತು. ಸಿಮ್ರನ್‌ 11, 17, 33, 34 ಮತ್ತು 45ನೇ ನಿಮಿಷಗಳಲ್ಲಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ವಿಜೇತ ತಂಡದ ಪರ ನಿಸಿಲಿಯಾ ಮಜಾವ್‌ (22, 68ನೇ ನಿಮಿಷ), ತನ್ವಿ ಹನ್ಸ್ (52ನೇ ನಿ.), ಲಿಟನ್ ಜಾಮ್ ರಿಕ್ಮಾ ದೇವಿ (89ನೇ ನಿ.) ಗೋಲು ದಾಖಲಿಸಿದರು.

ಸೋಮವಾರ ನಡೆಯುವ ಪಂದ್ಯಗಳಲ್ಲಿ ಪರಿಕ್ರಮ ಎಫ್‌ಸಿ– ಕಿಕ್‌ ಸ್ಟಾರ್ಟ್‌ ಎಫ್‌ಸಿ, ರೂಟ್ಸ್ –ಮಾ ಡರ್ನ್ ಗರ್ಲ್ಸ್, ಕೆಂಪ್‌– ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗುವವು.

ADVERTISEMENT

ಪಂದ್ಯ ಡ್ರಾ: ಬಿಡಿಫ್‌ಎ ಪುರುಷರ ಸೂಪರ್ ಡಿವಿಷನ್‌ ಲೀಗ್‌ನಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌– ಎಂಇಜಿ ಆಂಡ್‌ ಸೆಂಟರ್‌ ಎಫ್‌ಸಿ ನಡುವಣ ಪಂದ್ಯ ಗೋಲುರಹಿತವಾಗಿ ಡ್ರಾ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.