ADVERTISEMENT

ಫುಟ್‌ಬಾಲ್‌: ಅಗ್ನಿಪುತ್ರಕ್ಕೆ ಮಣಿದ ಕೊಡಗು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 15:41 IST
Last Updated 13 ಅಕ್ಟೋಬರ್ 2024, 15:41 IST
ಬೆಂಗಳೂರು ಯುನೈಟೆಡ್‌ನ ರಿಷಭ್ ಡೊಬ್ರಿಯಾಲ್ (ಎಡ) ಮತ್ತು ಕಿಕ್‌ಸ್ಟಾರ್ಟ್‌ನ ಹೆಬಿ ಸಿ. (ಬಲ) ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್‌
ಬೆಂಗಳೂರು ಯುನೈಟೆಡ್‌ನ ರಿಷಭ್ ಡೊಬ್ರಿಯಾಲ್ (ಎಡ) ಮತ್ತು ಕಿಕ್‌ಸ್ಟಾರ್ಟ್‌ನ ಹೆಬಿ ಸಿ. (ಬಲ) ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್‌   

ಬೆಂಗಳೂರು: ಸೂರ್ಯ ಯು.ಕೆ. ಗಳಿಸಿದ ಏಕೈಕ ಗೋಲಿನ ನೆರವಿನಿಂದ ಎಫ್‌ಸಿ ಅಗ್ನಿಪುತ್ರ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 1–0ಯಿಂದ ಕೊಡಗು ಎಫ್‌ಸಿ ತಂಡವನ್ನು ಮಣಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸೂರ್ಯ 9ನೇ ನಿಮಿಷದಲ್ಲಿ ಗೆಲುವಿನ ಗೋಲು ದಾಖಲಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವು ಗೋಲುರಹಿತವಾಗಿ ಕಿಕ್‌ಸ್ಟಾರ್ಟ್‌ ಎಫ್‌ಸಿ ಜೊತೆ ಡ್ರಾ ಸಾಧಿಸಿತು.

ADVERTISEMENT

ಇಂದಿನ ಪಂದ್ಯಗಳು

ಎಂಇಜಿ ಅಂಡ್‌ ಸೆಂಟರ್‌ ಎಫ್‌ಸಿ– ರೆಬೆಲ್ಸ್‌ ಎಫ್‌ಸಿ (ಮಧ್ಯಾಹ್ನ 12.45)

ಪರಿಕ್ರಮ ಎಫ್‌ಸಿ– ಸೌತ್‌ ಯುನೈಟೆಡ್‌ ಎಫ್‌ಸಿ (ಮಧ್ಯಾಹ್ನ 3.45) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.