ಬೆಂಗಳೂರು: ಹಾಲಿ ಚಾಂಪಿಯನ್ ಅಗ್ನಿಪುತ್ರ ತಂಡವು ಸಿ. ಪುಟ್ಟಯ್ಯ ಸ್ಮಾರಕ ಕಪ್ ಟೂರ್ನಿಯ ಪಂದ್ಯದಲ್ಲಿ 2–0 ಗೋಲುಗಳಿಂದ ಪರಿಕ್ರಮ ಎಫ್‌ಸಿ ತಂಡವನ್ನು ಮಣಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಅಗ್ನಿಪುತ್ರ ತಂಡದ ಪರ ಸತೀಶ್ ಕುಮಾರ್ (45ನೇ ನಿಮಿಷ) ಮತ್ತು ಅಜ್ಫರ್ ಮೂರಾನಿ (62ನೇ) ಅವರು ತಲಾ ಒಂದು ಗೋಲು ಗಳಿಸಿದರು.
ಎ ಗುಂಪಿನ ಪಂದ್ಯದಲ್ಲಿ ರೆಬೆಲ್ಸ್ ಎಫ್‌ಸಿ ತಂಡವು 2–2 ಗೋಲುಗಳಿಂದ ಕೊಡಗು ಎಫ್‌ಸಿ ಜೊತೆ ಡ್ರಾ ಸಾಧಿಸಿತು. ರೆಬೆಲ್ಸ್ ಪರ ರಿನ್ರೀತಾನಾ ಶೈಜಾ (29ನೇ ಮತ್ತು 66ನೇ) ಗೋಲು ಗಳಿಸಿದರೆ, ಕೊಡಗು ತಂಡದ ಪರ ಬಿ.ಎಸ್. ಮೃಣಾಲ್ ಮುತ್ತಣ್ಣ (19ನೇ) ಮತ್ತು ಡಿ. ಲಾಲ್ಸಂಗ್ಪುಯಾ (35ನೇ) ಚೆಂಡನ್ನು ಗುರಿ ಸೇರಿಸಿದರು.
ನಾಳಿನ ಪಂದ್ಯಗಳು
ಎಂಎಫ್‌ಎಆರ್ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ– ಎಎಸ್‌ಸಿ ಅಂಡ್ ಸೆಂಟರ್ ಎಫ್‌ಸಿ (ಮಧ್ಯಾಹ್ನ 1)
ರೂಟ್ಸ್ ಎಫ್‌ಸಿ– ಕಿಕ್‌ಸ್ಟಾರ್ಟ್ ಎಫ್‌ಸಿ (ಸಂಜೆ 4)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.