ತಿರುವನಂತಪುರಂ: ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಅಧ್ಯಕ್ಷ ಕಲ್ಯಾಣ್ ಚೌಬೆ ಅವರು ಅನೈತಿಕ ವ್ಯವಹಾರಗಳ ಮೂಲಕ ಮಂಡಳಿಗೆ ಆರ್ಥಿಕ ನಷ್ಟ ಉಂಟುಮಾಡಿದ್ದಾರೆಂದು ಆರೋಪಿಸಿ ಫೆಡರೇಷನ್‌ನ ಮಾಜಿ ಕಾರ್ಯದರ್ಶಿ ಶಾಜಿ ಪ್ರಭಾಕರನ್ ಅವರು ಎಐಎಫ್‌ಎಫ್ ಎಥಿಕಲ್ ಕಮಿಟಿ, ಏಷ್ಯನ್ ಫುಟ್‌ಬಾಲ್ ಒಕ್ಕೂಟ ಮತ್ತು ಫಿಫಾಕ್ಕೆ ದೂರು ನೀಡಿದ್ದಾರೆ.
ಚೌಬೆ ಅವರು ಸ್ವಜನಪಕ್ಷಪಾತ ಮತ್ತು ಫಿಫಾ ಹೆಸರನ್ನು ಅದರ ಅನುಮತಿ ಪಡೆಯದೇ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಭಾನುವಾರ ಸಲ್ಲಿಸಿರುವ ದೂರಿನಲ್ಲಿ ಶಾಜಿ ಆರೋಪಿಸಿದ್ದಾರೆ.
ಪ್ರಭಾಕರನ್ ಅವರ ಆರೋಪಗಳ ಬಗ್ಗೆ ಸುದ್ದಿಸಂಸ್ಥೆ ಚೌಬೆ ಅವರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.
ಚೌಬೆ ವಿರುದ್ಧ ಪ್ರಭಾಕರನ್ ಮಾಡಿರುವ ಆರೋಪಗಳಲ್ಲಿ ಹಿತಾಸಕ್ತಿ ಸಂಘರ್ಷ, ಎಐಎಫ್‌ಎಫ್ ಪ್ರತಿಷ್ಠೆಗೆ ಕುಂದು ತರುವ ಮತ್ತು ಹಣಕಾಸಿನ ನಷ್ಟ ಉಂಟುಮಾಡುವಂಥ ಕ್ರಮ, ಸುಳ್ಳು ಮಾಹಿತಿ, ತಮ್ಮ ರಾಜಕೀಯ ಹಿತಾಸಕ್ತಿ ಬೆಳೆಸಿಕೊಳ್ಳಲು ಎಐಎಫ್‌ಎಫ್ ಹೆಸರಿನ ಬಳಕೆ ಆರೋಪಗಳು ಸೇರಿವೆ.
ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಡುವುದಾಗಿ ಶಾಜಿ ಪ್ರಭಾಕರನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.