ADVERTISEMENT

ಫುಟ್‌ಬಾಲ್‌: ಭಾರತ 23 ವರ್ಷದೊಳಗಿನವರ ತಂಡಕ್ಕೆ ಜಯ

ಪಿಟಿಐ
Published 25 ಅಕ್ಟೋಬರ್ 2021, 10:41 IST
Last Updated 25 ಅಕ್ಟೋಬರ್ 2021, 10:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದುಬೈ: ಭಾರತ 23 ವರ್ಷದೊಳಗಿನವರ ಫುಟ್‌ಬಾಲ್‌ ತಂಡವು ಏಷ್ಯಾ ಕಪ್‌ ಅರ್ಹತಾ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ 2–1ರಿಂದ ಒಮನ್ ತಂಡವನ್ನು ಪರಾಭವಗೊಳಿಸಿತು.

ಪಂದ್ಯದ ಏಳನೇ ನಿಮಿಷದಲ್ಲೇ ಸ್ಪಾಟ್‌ ಕಿಕ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ರಹೀಂ ಅಲಿ ಭಾರತ ತಂಡಕ್ಕೆ ಮುನ್ನಡೆ ಒದಗಿಸಿದರು.

ವಿಕ್ರಂ ಈ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.38ನೇ ನಿಮಿಷದಲ್ಲಿ ರಹೀಂ ಅಲಿ ಅವರಿಂದ ಪಾಸ್ ಪಡೆದ ಅವರು ಒಮನ್‌ ಗೋಲ್‌ಕೀಪರ್‌ನನ್ನು ವಂಚಿಸಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸುವಲ್ಲಿ ಯಶಸ್ವಿಯಾದರು.

ADVERTISEMENT

89ನೇ ನಿಮಿಷದಲ್ಲಿ ಒಮನ್‌ನ ಅಬ್ದುಲ್ಲಾ ತಮ್ಮ ತಂಡದ ಹಿನ್ನಡೆಯನ್ನು ತಗ್ಗಿಸಿದರು.

‘ಇದು ರೋಮಾಂಚನಕಾರಿ ಪಂದ್ಯವಾಗಿತ್ತು. ಆರಂಭದಲ್ಲೇ ಗೋಲು ಗಳಿಸಬೇಕೆಂಬ ನಮ್ಮ ಪ್ರಯತ್ನ ಯಶಸ್ವಿಯಾಯಿತು. ಆ ಬಳಿಕ ಆಟದ ತಂತ್ರವನ್ನು ಬದಲಿಸಿದ ಕಾರಣ ಜಯ ಒಲಿಯಿತು‘ ಎಂದು ಭಾರತ ತಂಡದ ಮುಖ್ಯ ಕೋಚ್ ಇಗರ್ ಸ್ಟಿಮ್ಯಾಚ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.