ಫುಟ್‌ಬಾಲ್
ಯಾಂಗುನ್ (ಮ್ಯಾನ್ಮಾರ್),: ಸುಧಾರಿತ ಆಟದ ಪ್ರದರ್ಶನ ನೀಡಿದ ಭಾರತ ಸೀನಿಯರ್ ಮಹಿಳಾ ಫುಟ್‌ಬಾಲ್ ತಂಡ ಶುಕ್ರವಾರ ಎರಡನೇ ಹಾಗೂ ಅಂತಿಮ ಸೌಹಾರ್ದ ಪಂದ್ಯದಲ್ಲಿ ಆತಿಥೇಯ ಬರ್ಮಾ ತಂಡದ ಜೊತೆ 1–1 ಡ್ರಾ ಮಾಡಿಕೊಂಡಿತು.
ಆ ಮೂಲಕ ಇತ್ತೀಚಿನ ವರ್ಷಗಳಲ್ಲಿ ಕಾಣುತ್ತಿದ್ದ ಸೋಲಿನ ಸರಣಿ ತುಂಡರಿಸಿತು. ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ 1–2 ಗೋಲುಗಳ ಅಂತರದಿಂದ ಸೋಲು ಅನುಭವಿಸಿತ್ತು.
ಶುಕ್ರವಾರ ನಡೆದ ಪಂದ್ಯದ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ಮಳೆಯ ನಡುವೆ ಸಾಗಿದ ಪಂದ್ಯದಲ್ಲಿ ಭಾರತದ ಗೋಲು ಪ್ರಯತ್ನಗಳು ಮ್ಯಾನ್ಮಾರ್‌ನ ರಕ್ಷಣಾ ವ್ಯೂಹದ ಎದುರು ವಿಫಲವಾದವು. ಪೆನಾಲ್ಟಿ ಭಾಗವೂ ತೇವಗೊಂಡಿತ್ತು.
48ನೇ ನಿಮಿಷ ಪ್ಯಾರಿ ಕ್ಸಾಕ್ಸಾ ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ ಎರಡೇ ನಿಮಿಷಗಳಲ್ಲಿ ಮ್ಯಾನ್ಮಾರ್ ತಂಡ ಸಮ ಮಾಡಿಕೊಂಡಿತು. ಆ ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿದರು ವಿನ್ ಥೀಂಗಿ ತುನ್ ಆ ಗೋಲು ಗಳಿಸಿದರು. ನಂತರ ಎರಡೂ ತಂಡಗಳಿಗೆ ಅವಕಾಶ ದೊರೆತರೂ ಅವು ಗೋಲಾಗಿ ಪರಿವರ್ತನೆಯಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.