ADVERTISEMENT

ಫುಟ್‌ಬಾಲ್‌: ಭಾರತ–ಸರ್ಬಿಯಾ ಸೆಣಸು

ಪಿಟಿಐ
Published 8 ಸೆಪ್ಟೆಂಬರ್ 2018, 13:27 IST
Last Updated 8 ಸೆಪ್ಟೆಂಬರ್ 2018, 13:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹತ್ತೊಂಬತ್ತು ವರ್ಷದೊಳಗಿನವರ ಭಾರತ ಫುಟ್‌ಬಾಲ್‌ ತಂಡವು ಅಭ್ಯಾಸ ಪಂದ್ಯಗಳನ್ನು ಆಡಲು ಸರ್ಬಿಯಾಗೆ ತೆರಳಲಿದೆ.

ಸರ್ಬಿಯಾ ಎದುರಿನ ಈ ಎರಡು ಅಭ್ಯಾಸ ಪಂದ್ಯಗಳು ಸೆಪ್ಟೆಂಬರ್‌ 13 ಹಾಗೂ 17ರಂದು ನಡೆಯಲಿವೆ.

ಹಿರೋ ಐ–ಲೀಗ್‌ ಹಾಗೂ ಮುಂದಿನ ವರ್ಷ ನಡೆಯುವ ಎಎಫ್‌ಸಿ ಚಾಂಪಿಯನ್‌ಷಿಪ್‌ಗೆ ಪೂರ್ವಸಿದ್ಧತೆಯಾಗಿ ಈ ಅಭ್ಯಾಸ ಪಂದ್ಯಗಳನ್ನು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಆಯೋಜಿಸಿದೆ.

ADVERTISEMENT

‘ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರ 50 ಸ್ಥಾನದೊಳಗಿರುವ ತಂಡಗಳ ವಿರುದ್ಧ ಆಡಿದರೆ ತಂಡದ ಆಟಗಾರರಿಗೆ ಅನುಭವ ಹೆಚ್ಚಾಗುತ್ತದೆ. ಮುಂದಿನ ಒಂದೂವರೆ ತಿಂಗಳಲ್ಲಿ ಇಂತಹ ಐದು ತಂಡಗಳೊಂದಿಗೆ ಭಾರತ ಸೆಣಸಲಿದೆ’ ಎಂದು ಭಾರತ ತಂಡದ ನಿರ್ದೇಶಕ ಅಭಿಷೇಕ್‌ ಯಾದವ್‌ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಚತುಷ್ಕೋನ ಟೂರ್ನಿಯಲ್ಲಿ ಕ್ರೊವೇಷ್ಯಾ, ಫ್ರಾನ್ಸ್‌ ಹಾಗೂ ಸ್ಲೊವೇನಿಯಾ ತಂಡಗಳ ವಿರುದ್ಧ ಭಾರತ ಸ್ಪರ್ಧಿಸಿತ್ತು. ಅದಕ್ಕೂ ಮುನ್ನ ನಡೆದ ಕೋಟಿಫ್‌ ಕಪ್‌ ಟೂರ್ನಿಯಲ್ಲಿ ಭಾರತ 2–1ರಿಂದ ಅರ್ಜೆಂಟೀನಾ ಎದುರು ಗೆದ್ದಿತ್ತು. ವೆನೆಜುವೇಲಾ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.