ADVERTISEMENT

ಬಾಲಕಿಯರ ಫುಟ್‌ಬಾಲ್‌ ತಂಡಕ್ಕೆ ₹22 ಲಕ್ಷ ಬಹುಮಾನ

ಪಿಟಿಐ
Published 21 ಅಕ್ಟೋಬರ್ 2025, 18:48 IST
Last Updated 21 ಅಕ್ಟೋಬರ್ 2025, 18:48 IST
.
.   

ನವದೆಹಲಿ: ಎಎಫ್‌ಸಿ 17 ವರ್ಷದೊಳಗಿನ ಬಾಲಕಿಯರ ಏಷ್ಯಾ ಕಪ್‌ ಫುಟ್‌ಬಾಲ್‌ ಟೂರ್ನಿಗೆ ಇದೇ ಮೊದಲ ಬಾರಿಗೆ ಅರ್ಹತೆ ಗಿಟ್ಟಿಸಿಕೊಂಡ ಭಾರತ ತಂಡಕ್ಕೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಮಂಗಳವಾರ ₹22 ಲಕ್ಷ ಬಹುಮಾನ (25,000 ಅಮೆರಿಕನ್‌ ಡಾಲರ್‌) ಘೋಷಿಸಿದೆ.

ಅಸಾಧಾರಣ ಪ್ರದರ್ಶನ ತೋರಿ ಏಷ್ಯಾಕಪ್‌ ಟೂರ್ನಿಯಲ್ಲಿ ಭಾಗವಹಿಸುವ ಅವಕಾಶ ಪಡೆದಿರುವ ಬಾಲಕಿಯರ ತಂಡವನ್ನು ಅಭಿನಂದಿಸಲು ನಗದು ಬಹುಮಾನ ಘೋಷಿಸಲಾಗಿದೆ ಎಂದು ಎಐಎಫ್‌ಎಫ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ 17 ವರ್ಷದೊಳಗಿನ ಬಾಲಕಿಯರ ತಂಡವು ಕಳೆದ ವಾರ ಕಿರ್ಗಿಸ್ತಾನ ಹಾಗೂ ಉಜ್ಬೇಕಿಸ್ತಾನ ತಂಡಗಳನ್ನು ಮಣಿಸಿ, ಜಿ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಚೀನಾದಲ್ಲಿ ಮುಂದಿನ ವರ್ಷ ನಡೆಯಲಿರುವ ಟೂರ್ನಿಗೆ ಅರ್ಹತೆ ಸಂಪಾದಿಸಿತ್ತು.

ADVERTISEMENT

ಭಾರತ ತಂಡವು ಕೊನೆಯಬಾರಿಗೆ 2005ರಲ್ಲಿ ಈ ಟೂರ್ನಿಯಲ್ಲಿ ಭಾಗವಹಿಸಿತ್ತು. ಆದರೆ, ಆ ಸಮಯದಲ್ಲಿ ಕ್ವಾಲಿಫಿಕೇಷನ್ ಸುತ್ತು ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.