ಫುಟ್‌ಬಾಲ್
ಥಿಂಪು: ಭಾರತ ತಂಡ, ಸ್ಯಾಫ್ 17 ವರ್ಷದೊಳಗಿನವರ ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಭಾನುವಾರ ಬಾಂಗ್ಲಾದೇಶ ಎದುರು 3–4 ಗೋಲುಗಳಿಂದ ಸೋತರೂ, ಚಾಂಪಿಯನ್ ಕಿರೀಟ ಧರಿಸುವಲ್ಲಿ ಯಶಸ್ವಿಯಾಯಿತು.
ಡಬಲ್ ರೌಂಡ್ ರಾಬಿಲ್ ಲೀಗ್ ಮಾದರಿಯಲ್ಲಿ ನಡೆದ ಟೂರ್ನಿಯಲ್ಲಿ ಇದು ಭಾರತಕ್ಕೆ ಎದುರಾದ ಏಕೈಕ ಸೋಲು. ಭಾರತ 6 ಪಂದ್ಯಗಳಿಂದ 15 ಪಾಯಿಂಟ್ಸ್ ಪಡೆದು ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಸತತ ಐದು ಪಂದ್ಯಗಳನ್ನು ಗೆದ್ದ ಕಾರಣ, ಭಾರತ ಕೊನೆಯ ಪಂದ್ಯಕ್ಕೆ ಮೊದಲೇ ಪ್ರಶಸ್ತಿ ಖಚಿತಪಡಿಸಿಕೊಂಡಿತ್ತು.
ಭಾರತ, ಮೊದಲ ಸುತ್ತಿನಲ್ಲಿ (ಆಗಸ್ಟ್ 22ರಂದು) ಬಾಂಗ್ಲಾದೇಶ ತಂಡವನ್ನು 2–0 ಗೋಲುಗಳಿಂದ
ಪರಾಭವಗೊಳಿಸಿತ್ತು.
ಭಾರತ ತಂಡವು, ಅಕ್ಟೋಬರ್‌ನಲ್ಲಿ ಕಿರ್ಗಿಸ್ ರಿಪಬ್ಲಿಕ್‌ನ ಬಿಷ್ಕೆಕ್‌ನಲ್ಲಿ ನಡೆಯಲಿರುವ ಎಎಫ್‌ಸಿ 17 ವರ್ಷದೊಳಗಿ ನವರ ಮಹಿಳಾ ಏಷ್ಯಾ ಕಪ್ ಕ್ವಾಲಿಫೈಯರ್ಸ್‌ಗೆ ಸಜ್ಜಾಗಲು ಬೆಂಗಳೂರಿನಲ್ಲಿ ಶಿಬಿರದಲ್ಲಿ ಭಾಗವಹಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.