ನವದೆಹಲಿ: ಭಾರತ ಫುಟ್‌ಬಾಲ್ ತಂಡದ ನೂತನ ಮುಖ್ಯ ಕೋಚ್ ನೇಮಕ ಪ್ರಕ್ರಿಯೆ ಆರಂಭವಾಗಿದೆ.
ಮುಖ್ಯ ಕೋಚ್ ನೇಮಕ ಸಂಬಂಧ ಶುಕ್ರವಾರ ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್ ಹಂತದ ರಾಷ್ಟ್ರೀಯ ಫುಟ್‌ಬಾಲ್ ತಂಡಗಳಿಗೆ ಕೋಚ್ ಆಗಿ ಕನಿಷ್ಠ 10 ವರ್ಷ ಕಾರ್ಯನಿರ್ವಹಿಸಿದ ಅನುಭವವನ್ನು ಮೂಲ ಅರ್ಹತೆಯಾಗಿ ನಿಗದಿಪಡಿಸಲಾಗಿದೆ. ಕೋಚ್ ಆಗಬಯಸುವವರು ಸಾಂಸ್ಕೃತಿಕ ಸೂಕ್ಷ್ಮತೆಯನ್ನೂ ಹೊಂದಿರಬೇಕು ಎಂದು ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ತಿಳಿಸಿದೆ. ಅರ್ಜಿ ಸಲ್ಲಿಕೆಗೆ ಜುಲೈ 13 ಕೊನೆಯ ದಿನ.
ತಂಡವು ಸತತವಾಗಿ ಹಿನ್ನಡೆ ಕಾಣುತ್ತಿದ್ದ ಕಾರಣ, ಈ ಹಿಂದಿನ ಹೆಡ್ ಕೋಚ್ ಮನೊಲೊ ಮಾರ್ಕ್ವೆಝ್ ಅವರು ಈಚೆಗೆ ಹುದ್ದೆ ತೊರೆದಿದ್ದರು. ಮೂಲ ಒಪ್ಪಂದದ ಪ್ರಕಾರ ಅವರಿಗೆ ಇನ್ನೂ ಒಂದು ವರ್ಷ ಅವಧಿ ಉಳಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.