ADVERTISEMENT

ಭಾರತ ತಂಡದಲ್ಲಿನ ಬದಲಾವಣೆ ಅನುಕೂಲಕರ

ಫುಟ್‌ಬಾಲ್‌ ಆಟಗಾರ್ತಿ ಬಾಲಾದೇವಿ ಅಭಿಮತ

ಪಿಟಿಐ
Published 29 ಅಕ್ಟೋಬರ್ 2019, 19:34 IST
Last Updated 29 ಅಕ್ಟೋಬರ್ 2019, 19:34 IST
ಬಾಲಾ ದೇವಿ
ಬಾಲಾ ದೇವಿ   

ನವದೆಹಲಿ: ತಂಡದಲ್ಲಿಇತ್ತೀಚಿಗೆ ಆಗುತ್ತಿರುವ ಬದಲಾವಣೆಗಳು ಆಟಗಾರರಿಗೆ ಅನುಕೂಲಕರವಾಗಿವೆ ಎಂದು ಭಾರತ ಫುಟ್‌ಬಾಲ್‌ ತಂಡದ ಆಟಗಾರ್ತಿ ಬಾಲಾ ದೇವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತ ಮಹಿಳಾ ತಂಡ ವಿಯೆಟ್ನಾಂ ವಿರುದ್ಧ ನವೆಂಬರ್‌ 3 ಹಾಗೂ 6ರಂದು ನಡೆಯಲಿರುವ ಸೌಹಾರ್ಧ ಪಂದ್ಯಗಳ ಸಿದ್ಧತೆಗಾಗಿ ತರಬೇತಿ ಶಿಬಿರ ಆಯೋಜಿಸಿದೆ.

‘2005ರಲ್ಲಿ ನಾನು ರಾಷ್ಟ್ರೀಯ ಫುಟ್‌ಬಾಲ್‌ ತಂಡಕ್ಕೆ ಕಾಲಿಟ್ಟೆ. ಆಗಿನಿಂದ ಹಲವು ಬದಲಾವಣೆಗಳು ಕಂಡಿದ್ದೇನೆ. ಎಲ್ಲವೂ ಆಟಗಾರ್ತಿಯರಿಗೆ ಸಹಾಯಕವಾಗಿವೆ. ಆಹಾರ ಪದ್ಧತಿ, ತರಬೇತಿ ಅವಧಿಗಳು ಅದರಲ್ಲೂ ಪ್ರಮುಖವಾಗಿ ವಿಡಿಯೊ ವಿಶ್ಲೇಷಣೆಗಳಲ್ಲಿ ಗಣನೀಯ ಬದಲಾವಣೆಗಳು ಆಗಿವೆ’ ಎಂದರು.

ADVERTISEMENT

‘ಮೊದಲಿಗಿಂತ ಈಗ ಜಿಮ್‌ನಲ್ಲಿ ನಾವು ಹೆಚ್ಚು ಬೆವರು ಹರಿಸುತ್ತಿದ್ದೇವೆ. ಪ್ರಮುಖ ವ್ಯಾಯಾಮಗಳಿಗೆ ಒತ್ತು ನೀಡುತ್ತಿದ್ದೇವೆ. ಈ ಪ್ರಕ್ರಿಯೆಗಳು ಗಾಯಗೊಳ್ಳುವಿಕೆಯನ್ನು ಕಡಿಮೆ ಮಾಡಿವೆ ಹಾಗೂ ಬೇಗ ಗುಣಮುಖವಾಗಲು ಅನುಕೂಲಕರವಾಗಿವೆ’ ಎಂದು ತಂಡದ ಪ್ರಮುಖ ಆಟಗಾರ್ತಿಯಾಗಿರುವ ಬಾಲಾ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.