ADVERTISEMENT

ಮೊದಲ ಬಾರಿ ಬ್ರೆಜಿಲ್ ಎದುರು ಕಣಕ್ಕಿಳಿಯಲಿರುವ ಭಾರತ

2022ಕ್ಕೆ ನಿಗದಿಯಾಗಿರುವ ಎಎಫ್‌ಸಿ ಏಷ್ಯನ್ ಕಪ್ ಟೂರ್ನಿಗೆ ಪೂರ್ವಸಿದ್ದತೆ

ಪಿಟಿಐ
Published 9 ನವೆಂಬರ್ 2021, 13:04 IST
Last Updated 9 ನವೆಂಬರ್ 2021, 13:04 IST
ಭಾರತ ಮಹಿಳಾ ಫುಟ್‌ಬಾಲ್ ತಂಡ
ಭಾರತ ಮಹಿಳಾ ಫುಟ್‌ಬಾಲ್ ತಂಡ   

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್‌ ಟೂರ್ನಿಯ ಪೂರ್ವಸಿದ್ಧತೆಯ ಭಾಗವಾಗಿ ಈ ತಿಂಗಳಾಂತ್ಯದಲ್ಲಿ ನಡೆಯುವ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಭಾರತ ಮಹಿಳಾ ಫುಟ್‌ಬಾಲ್ ತಂಡವು ಮೊದಲ ಬಾರಿಗೆ ವಿಶ್ವಕಪ್ಮಾಜಿ ರನ್ನರ್ ಅಪ್ ಬ್ರೆಜಿಲ್ ವಿರುದ್ಧ ಸೆಣಸಲಿದೆ.

ಈ ಟೂರ್ನಿಯಲ್ಲಿ ಫಿಫಾ ರ‍್ಯಾಂಕಿಂಗ್‌ನಲ್ಲಿ 57ನೇ ಸ್ಥಾನದಲ್ಲಿರುವ ಭಾರತ ತಂಡವು, 37ನೇ ಸ್ಥಾನದಲ್ಲಿರುವ ಚಿಲಿ ಮತ್ತು ವೆನೆಜುವೆಲಾ (56ನೇ) ತಂಡಗಳನ್ನೂ ಎದುರಿಸಲಿದೆ. ನವೆಂಬರ್ 25ರಿಂದ ಡಿಸೆಂಬರ್ 1 ರವರೆಗೆ ಬ್ರೆಜಿಲ್‌ನ ಮನೌಸ್‌ನಲ್ಲಿ ಟೂರ್ನಿ ನಿಗದಿಯಾಗಿದೆ.

ಬ್ರೆಜಿಲ್ ಮಹಿಳಾ ತಂಡವು 2007ರ ವಿಶ್ವಕಪ್ ರನ್ನರ್-ಅಪ್ ಮತ್ತು 2004 ಮತ್ತು 2008ರಲ್ಲಿ ಒಲಿಂಪಿಕ್ಸ್ ಬೆಳ್ಳಿ ಪದಕ ಗೆದ್ದುಕೊಂಡಿತ್ತು. ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಬ್ರೆಜಿಲ್ಅನ್ನು ಖ್ಯಾತ ಆಟಗಾರ್ತಿ ಮಾರ್ಟಾ ವಿಯೆರಾ ಡ‘ ಸಿಲ್ವಾ ನಾಯಕಿಯಾಗಿ ಮುನ್ನಡೆಸಲಿದ್ದಾರೆ. ವಿಶ್ವದ ಶ್ರೇಷ್ಠ ಮಹಿಳಾ ಫುಟ್‌ಬಾಲ್ ಆಟಗಾರ್ತಿಯರಲ್ಲಿ ಅವರೂ ಒಬ್ಬರಾಗಿದ್ದಾರೆ.

ADVERTISEMENT

‘ಭಾರತದ ಯಾವುದೇ ಸೀನಿಯರ್ ರಾಷ್ಟ್ರೀಯ ತಂಡವು ಬ್ರೆಜಿಲ್, ಚಿಲಿ ಅಥವಾ ವೆನೆಜುವೆಲಾ ವಿರುದ್ಧ ಆಡಲಿರುವುದು ಇದೇ ಮೊದಲು‘ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್ಎಫ್) ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ವರ್ಷ ಜನವರಿ 20ರಿಂದ ಫೆಬ್ರವರಿ 6ರವರೆಗೆ ಮುಂಬೈ ಮತ್ತು ಪುಣೆಯಲ್ಲಿಏಷ್ಯನ್ ಕಪ್‌ ಟೂರ್ನಿ ನಿಗದಿಯಾಗಿದೆ.

ಬ್ರೆಜಿಲ್‌ನ ಮನೌಸ್‌ನಲ್ಲಿ ಭಾರತದ ಪಂದ್ಯಗಳು

ದಿನಾಂಕ;ಎದುರಾಳಿ

ನ.25;ಬ್ರೆಜಿಲ್

ನ.28;ಚಿಲಿ

ಡಿ.1;ವೆನೆಜುವೆಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.