ADVERTISEMENT

ಐ–ಲೀಗ್‌: ಇಂಟರ್‌ ಕಾಶಿಗೆ ಚಾಂಪಿಯನ್‌ಪಟ್ಟ

ಪಿಟಿಐ
Published 18 ಜುಲೈ 2025, 14:19 IST
Last Updated 18 ಜುಲೈ 2025, 14:19 IST
ಸಲಗಾಂವ್ಕರ್‌ ಎದುರಿನ ಐ ಲೀಗ್‌ ಪಂದ್ಯಕ್ಕಾಗಿ ಶುಕ್ರವಾರ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡದ ರಾಬಿನ್‌ ಸಿಂಗ್‌ (ನಡುವೆ) ಸಹ ಆಟಗಾರರ ಜೊತೆ ಅಭ್ಯಾಸ ನಡೆಸಿದರು 	–ಪ್ರಜಾವಾಣಿ ಚಿತ್ರ
ಸಲಗಾಂವ್ಕರ್‌ ಎದುರಿನ ಐ ಲೀಗ್‌ ಪಂದ್ಯಕ್ಕಾಗಿ ಶುಕ್ರವಾರ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡದ ರಾಬಿನ್‌ ಸಿಂಗ್‌ (ನಡುವೆ) ಸಹ ಆಟಗಾರರ ಜೊತೆ ಅಭ್ಯಾಸ ನಡೆಸಿದರು –ಪ್ರಜಾವಾಣಿ ಚಿತ್ರ   

ನವದೆಹಲಿ: ಗೋವಾದ ಚರ್ಚಿಲ್‌ ಬ್ರದರ್ಸ್‌ ತಂಡಕ್ಕೆ ಐ–ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ ಎಂದು ಘೋಷಿಸಿರುವ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ತೀರ್ಮಾನವನ್ನು ಸ್ವಿಜರ್ಲೆಂಡ್‌ ಮೂಲದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿ (ಸಿಎಎಸ್‌) ತಿರಸ್ಕರಿಸಿದೆ. ಇದರಿಂದಾಗಿ ಇಂಟರ್‌ ಕಾಶಿ ತಂಡವನ್ನು ಚಾಂಪಿಯನ್‌ ಎಂದು ಶುಕ್ರವಾರ ಪ್ರಕಟಿಸಲಾಗಿದೆ.

ಮೂರು ತಿಂಗಳ ಹಿಂದೆ ಎಐಎಫ್‌ಎಫ್‌, ಗೋವಾದ ತಂಡವನ್ನು ಚಾಂಪಿಯನ್‌ ಎಂದು ಘೋಷಿಸಿತ್ತು. ಈಗ ತನ್ನದೇ ನಿರ್ಧಾರ ಬದಲಾಗಿರುವುದು ಎಐಎಫ್‌ಎಫ್‌ಗೆ ಹಿನ್ನಡೆ ಆದಂತಾಗಿದೆ.

ಎದುರಾಳಿ ತಂಡವೊದು ತನ್ನ ವಿರುದ್ಧ ಅನರ್ಹ ಆಟಗಾರರನೊಬ್ಬನ್ನು ಆಡಿಸಿರುವ ವಿಷಯಕ್ಕೆ ಸಂಬಂಧಿಸಿ ಇಂಟರ್‌ ಕಾಶಿ ತಂಡ ಆಕ್ಷೇಪ ಎತ್ತಿತ್ತು. (ಆ ಪಂದ್ಯದಲ್ಲಿ ನಾಮಧಾರಿ ಎದುರು ಇಂಟರ್‌ ಕಾಶಿ 0–2 ಗೋಲುಗಳಿಂದ ಸೋತಿತ್ತು). ಆದರೆ ಅದರ ಅಕ್ಷೇಪವನ್ನು ಅಪೀಲುಗಳ ಸಮಿತಿ ತಳ್ಳಿಹಾಕಿತ್ತು.  ಅಂತಿಮ ಲೀಗ್‌ ನಂತರ ಚರ್ಚಿಲ್‌ ಬ್ರದರ್ಸ್‌ 40 ಮತ್ತು ಇಂಟರ್‌ ಕಾಶಿ 39 ಪಾಯಿಂಟ್‌ ಗಳಿಸಿದ್ದವು. ಹೀಗಾಗಿ ಗೋವಾದ ತಂಡವನ್ನು ಏಪ್ರಿಲ್‌ನಲ್ಲಿ ಚಾಂಪಿಯನ್ ಎಂದು ಸಾರಲಾಗಿತ್ತು.

ADVERTISEMENT

ಈಗ ಲುಸಾನ್‌ ಮೂಲದ ನ್ಯಾಯ ತೀರ್ಮಾನ ಮಂಡಳಿ ಆದೇಶದಿಂದ ಕಾಶಿ ತಂಡದ ಖಾತೆಗೆ ಎರಡು ಪಾಯಿಂಟ್‌ ಸೇರ್ಪಡೆಯಾಗಿ ಆ ತಂಡ 2024–25ನೇ ಸಾಲಿನ ಐ–ಲೀಗ್ ಚಾಂಪಿಯನ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.