ADVERTISEMENT

ಐಎಸ್‌ಎಲ್‌: ಜೆಮ್ಶೆಡ್‌ಪುರಕ್ಕೆ ಜಯದ ‘ಉಡುಗೊರೆ’

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 16:38 IST
Last Updated 10 ಫೆಬ್ರುವರಿ 2021, 16:38 IST
ಚೆನ್ನೈಯಿನ್ ಎಫ್‌ಸಿ ತಂಡದ ಇಸ್ಮಾಯಿಲ್ ರೂಟಿ ತವರೆಸ್‌ (ಎಡ) ಹಾಗೂ ಜೆಮ್ಶೆಡ್‌ಪುರ ಎಫ್‌ಸಿಯ ಸ್ಟೀಪನ್ ಎಜೆ ನಡುವೆ ಚೆಂಡಿಗಾಗಿ ಪೈಪೋಟಿ–ಪಿಟಿಐ ಚಿತ್ರ
ಚೆನ್ನೈಯಿನ್ ಎಫ್‌ಸಿ ತಂಡದ ಇಸ್ಮಾಯಿಲ್ ರೂಟಿ ತವರೆಸ್‌ (ಎಡ) ಹಾಗೂ ಜೆಮ್ಶೆಡ್‌ಪುರ ಎಫ್‌ಸಿಯ ಸ್ಟೀಪನ್ ಎಜೆ ನಡುವೆ ಚೆಂಡಿಗಾಗಿ ಪೈಪೋಟಿ–ಪಿಟಿಐ ಚಿತ್ರ   

ಬ್ಯಾಂಬೊಲಿಮ್‌: ಪಂದ್ಯದ ಕೊನೆಯ ನಿಮಿಷದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ನೀಡಿದ ‘ಉಡುಗೊರೆ ಗೋಲು‘ ಜೆಮ್ಶೆಡ್‌ಪುರ ತಂಡದ ಜಯಕ್ಕೆ ಕಾರಣವಾಯಿತು. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಬುಧವಾರ ಜೆಮ್ಶೆಡ್‌ಪುರ ಎಫ್‌ಸಿ ತಂಡವು 1–0ಯಿಂದ ಚೆನ್ನೈಯಿನ್ ಎಫ್‌ಸಿಗೆ ಸೋಲುಣಿಸಿತು.

ಪಂದ್ಯದ ನಾಲ್ಕನೇ ನಿಮಿಷದಲ್ಲಿ ಚೆನ್ನೈಯಿನ್ ತಂಡದ ಅವಕಾಶವೊಂದನ್ನು ಎದುರಾಳಿ ಗೋಲ್‌ಕೀಪರ್‌ ಟಿ.ಪಿ.ರೆಹನೇಶ್ ವಿಫಲಗೊಳಿಸಿದರು. ಬಳಿಕ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರೂ ಮೊದಲಾರ್ಧದಲ್ಲಿ ಯಶಸ್ಸು ಸಿಗಲಿಲ್ಲ. ಆ ಬಳಿಕವೂ ಇದೇ ಸ್ಥಿತಿ ಮುಂದುವರಿಯಿತು.

90ನೇ ನಿಮಿಷದಲ್ಲಿ ಈನೆಸ್‌ ಸಿಪೊವಿಚ್‌ ತಮ್ಮ ತಂಡ ಚೆನ್ನೈ ಎಫ್‌ಸಿಗೆ ಖಳನಾಯಕನಾದರು. ಚೆಂಡು ಹಿಡಿತಕ್ಕೆ ಪಡೆದಿದ್ದ ಜೆಮ್ಶೆಡ್‌ಪುರ ಎಫ್‌ಸಿಯ ಡೇವಿಡ್‌ ಗ್ರ್ಯಾಂಡೆ ಅವರು ಗೋಲು ಪೋಸ್ಟ್‌ನತ್ತ ಧಾವಿಸಿದರು. ಎದುರಾಳಿ ಗೋಲ್‌ಕೀಪರ್‌ನನ್ನು ಪರೀಕ್ಷಿಸಲು ಗೋಲು ಪೋಸ್ಟ್‌ನಿಂದ ಚೆಂಡನ್ನು ಸ್ವಲ್ಪ ದೂರಕ್ಕೆ ಕೊಂಡೊಯ್ಯುವ ವೇಳೆ ಆಕಸ್ಮಿಕವಾಗಿ ಸಿಪೊವಿಚ್‌ ಕಾಲಿಗೆ ಸಿಕ್ಕಿದ ಚೆಂಡು ಗೋಲಿನ ಬಲೆಯೊಳಗೆ ಸೇರಿತು. ಜೆಮ್ಶೆಡ್‌ಪುರ ತಂಡದಲ್ಲಿ ಸಂತಸ ಉಕ್ಕಿತು.

ADVERTISEMENT

ಜೆಮ್ಶೆಡ್‌ಪುರ ತಂಡವು ಪಾಯಿಂಟ್ಸ್‌ ಪಟ್ಟಿಯಲ್ಲಿ ಸದ್ಯ ಆರನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.