ADVERTISEMENT

ಫುಟ್‌ಬಾಲ್‌: ಕಿಕ್‌ಸ್ಟಾರ್ಟ್‌ಗೆ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 19:31 IST
Last Updated 24 ಜನವರಿ 2022, 19:31 IST
ಪ್ರಶಸ್ತಿ ವಿಜೇತ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡದ ಸಂಭ್ರಮ: (ಮೊದಲ ಸಾಲು: ಎಡದಿಂದ) ಜಯಶ್ರೀ ಇ, ಫಿಜಮ್ ಅಂಜಲಿ ಚಾನು, ತಾನಿಯಾ ಕಾಂತಿ, ವುಂಗ್ಲಾಮ್ಚಿಂಗ್, ಪಿ. ಕಾವ್ಯಾ, ಐಶ್ವರ್ಯ ಎ, ಕ್ಷೇತ್ರಿಮಯುಮ್ ಮಾರ್ಗರೇಟ್ ದೇವಿ, ಫಿಜಾಮ್ ಆಶಿಲಾ ಚಾನು, ಸುಶ್ಮಿತಾ ಲೆಪ್ಚಾ ಮತ್ತು ರೂಪಾಲಿ ಬೌರಿ. (ಮಧ್ಯದ ಸಾಲು) ಮೊನಾಲಿಸಾ, ಆರುಷಿ ಸಂತೋಷ್, ಸಿಬಾನಿ ಶರ್ಮಾ, ಖುನುಮಯುಮ್ ನಿರ್ಮಲಾ ದೇವಿ, ಸಮುಂಡೇಶ್ವರಿ, ಸೋನಿಯಾ ರಾಣಾ, ತನು, ಅಮೃತವರ್ಷಿಣಿ ಪಿ, ಫಂಜೌಬಮ್ ನಿರ್ಮಲಾ ದೇವಿ ಮತ್ತು ಜುಡಿತ್ ಸೋನಾಲಿ ಜಾನ್. (ಹಿಂದಿನ ಸಾಲು) ಬಿಮೋಲ್ ಬಾಲಾ, ಸರವಣ ಧರ್ಮನ್ ಡಿ (ಸಹಾಯಕ ಕೋಚ್), ಕೃಷ್ಣ ಕಾಳಿದಾಸನ್ (ಮುಖ್ಯ ಕೋಚ್), ಲಕ್ಷ್ಮಣ್ ಭಟ್ಟರೈ (ಮ್ಯಾನೇಜರ್), ರಘು ಕುಮಾರ್ ಮತ್ತು ಜೋನ್ಸ್ – ಪ್ರಜಾವಾಣಿ ಚಿತ್ರ

ಬೆಂಗಳೂರು: ಪಿ. ಕಾವ್ಯಾ ಗಳಿಸಿದ ಎರಡು ಗೋಲುಗಳ ನೆರವಿನಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡವು ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆಯ (ಕೆಎಸ್‌ಎಫ್‌ಎ) ಮಹಿಳಾ ಲೀಗ್‌ಫುಟ್‌ಬಾಲ್ ಟೂರ್ನಿಯ ಎರಡನೇ ಲೆಗ್‌ ಪಂದ್ಯದಲ್ಲಿ ಜಯ ಗಳಿಸಿತು.

ಟೂರ್ನಿಯುದ್ದಕ್ಕೂ ಅಮೋಘ ಸಾಮರ್ಥ್ಯ ತೋರುತ್ತ ಬಂದಿದ್ದ ಕಿಕ್‌ಸ್ಟಾರ್ಟ್‌ ಎಫ್‌ಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಮಿಸಾಕ ಯುನೈಟೆಡ್‌ ರನ್ನರ್ ಅಪ್ ಆಗಿತ್ತು. ಬಳಿಕ ಎರಡು ಲೆಗ್‌ ಪಂದ್ಯಗಳನ್ನು ಆಡಿಸಲಾಗಿತ್ತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ 3–1ರಿಂದ ಮಿಸಾಕ ಯುನೈಟೆಡ್‌ ತಂಡವನ್ನು ಸೋಲಿಸಿತು. ಕಾವ್ಯಾ 35 ಮತ್ತು 55ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ನಿರ್ಮಲಾ ದೇವಿ (16ನೇ ನಿಮಿಷ) ತಂಡದ ಜಯಕ್ಕೆ ಕಾಣಿಕೆ ನೀಡಿದರು.

ADVERTISEMENT

ಮಿಸಾಕ ತಂಡದ ಪರ ಏಕೈಕ ಗೋಲನ್ನು ಲಾಲ್‌ ಬಿಯಾಕ್ ಡಿಕಿ (75ನೇ ನಿಮಿಷ) ಗಳಿಸಿದರು.

ಟೂರ್ನಿಯಲ್ಲಿ ಒಟ್ಟು 15 ಗೋಲು ದಾಖಲಿಸಿದ ಕಾವ್ಯಾ ಲೀಗ್‌ ಶ್ರೇಷ್ಠ ಆಟಗಾರ್ತಿ ಗೌರವ ಗಳಿಸಿದರು. ಕಿಕ್‌ಸ್ಟಾರ್ಟ್‌ ಎಫ್‌ಸಿಯ ಸೋನಿಯಾ ರಾಣಾ ‘ಶ್ರೇಷ್ಠ ಡಿಫೆಂಡರ್‌, ಮಿಸಾಕ ಯುನೈಟೆಡ್‌ನ ರಮ್ಕಾ ರಾಮ್‌ಜಿ ‘ಶ್ರೇಷ್ಠ ಮಿಡ್‌ಫೀಲ್ಡರ್‌ ಮತ್ತು ಅದೇ ತಂಡದ ನೂರುಲ್‌ ಅಜುರಿನ್‌ ‘ಶ್ರೇಷ್ಠ ಗೋಲ್‌ಕೀಪರ್‘ ಪುರಸ್ಕಾರಗಳನ್ನು ಪಡೆದರು.

ಪ್ರಶಸ್ತಿ ವಿಜೇತ ಕಿಕ್‌ಸ್ಟಾರ್ಟ್‌ ಎಫ್‌ಸಿ ಮತ್ತು ರನ್ನರ್‌ಅಪ್‌ ಮಿಸಾಕ ತಂಡಗಳಿಗೆ ಕೆಎಸ್‌ಎಫ್‌ಎ ಅಧ್ಯಕ್ಷ, ಶಾಸಕ ಎನ್‌.ಎ. ಹ್ಯಾರಿಸ್‌ ಕ್ರಮವಾಗಿ ಟ್ರೋಫಿ ವಿತರಿಸಿದರು.

ಈ ಸಂದರ್ಭದಲ್ಲಿ ಕೆಎಸ್‌ಎಫ್‌ಎ ಪ್ರಧಾನ ಕಾರ್ಯದರ್ಶಿ ಎಂ. ಸತ್ಯನಾರಾಯಣ ಮತ್ತು ಡೆಪ್ಯುಟಿ ಪ್ರಧಾನ ಕಾರ್ಯದರ್ಶಿ ಅಸ್ಲಂ ಖಾನ್ ಈ ವೇಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.