ADVERTISEMENT

ಐಎಸ್‌ಎಲ್‌: ಜೆಮ್ಶೆಡ್‌ಪುರ ಜಯಭೇರಿ

ಪಿಟಿಐ
Published 25 ಫೆಬ್ರುವರಿ 2022, 18:34 IST
Last Updated 25 ಫೆಬ್ರುವರಿ 2022, 18:34 IST
ಅಭ್ಯಾಸ ನಡೆಸಿದ ಕೇರಳ ಬ್ಲಾಸ್ಟರ್ಸ್ ತಂಡದ ಆಟಗಾರರು
ಅಭ್ಯಾಸ ನಡೆಸಿದ ಕೇರಳ ಬ್ಲಾಸ್ಟರ್ಸ್ ತಂಡದ ಆಟಗಾರರು   

ಫತೋರ್ಡ: ಸಂಘಟಿತ ಆಟವಾಡಿದಜೆಮ್ಶೆಡ್‌ಪುರ ಎಫ್‌ಸಿ (ಜೆಎಫ್‌ಸಿ) ತಂಡವುಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿತು.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ 3–2ರಿಂದ ನಾರ್ತ್ ಈಸ್ಟ್ ಯುನೈಟೆಡ್‌ ಎಫ್‌ಸಿ ತಂಡವನ್ನು ಸೋಲಿಸಿತು. ವಿಜೇತ ತಂಡದ ಪರ ಸಿಮಿನ್ಲೆಲ್ ಡಂಗೆಲ್‌ (35ನೇ ನಿಮಿಷ), ಗ್ರೇಗ್‌ ಸ್ಟೀವರ್ಟ್‌ (59ನೇ ನಿ.) ಮತ್ತು ಜೋರ್ಡಾನ್ ಮರೆ (84ನೇ ನಿ.) ಗೋಲು ದಾಖಲಿಸಿದರು.

ನಾರ್ತ್ಈಸ್ಟ್ ತಂಡದ ಲಾಲ್ದನ್‌ಮಾವಿಯಾ ರಾಲ್ಟೆ (66ನೇ ನಿ.) ಮತ್ತು ಮಾರ್ಸೆಲೊ ಪೆರೆರಾ (67ನೇ ನಿ.) ಗೋಲು ಹೊಡೆದರು.

ADVERTISEMENT

ಕೇರಳಕ್ಕೆ ಸೆಮಿಫೈನಲ್ ಕನಸು: ವಾಸ್ಕೊದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಮತ್ತು ಚೆನ್ನೈಯಿನ್ ಎಫ್‌ಸಿ ತಂಡಗಳು ಸೆಣಸಲಿವೆ. ಸೆಮಿಫೈನಲ್ ಪ್ರವೇಶಿಸಬೇಕಾದರೆ ಕೇರಳ ಬ್ಲಾಸ್ಟರ್ಸ್‌ಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ.

ಮತ್ತೊಂದು ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ ಎಫ್‌ಸಿ ಗೋವಾವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.