ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಹೈದರಾಬಾದ್‌ಗೆ ಪುಟಿದೇಳುವ ಹಂಬಲ

ಕೇರಳ ಬ್ಲಾಸ್ಟರ್ಸ್‌ ಎದುರಾಳಿ

ಪಿಟಿಐ
Published 26 ಡಿಸೆಂಬರ್ 2020, 12:14 IST
Last Updated 26 ಡಿಸೆಂಬರ್ 2020, 12:14 IST
ಹೈದರಾಬಾದ್ ಎಫ್‌ಸಿ ತಂಡದ ಆಟಗಾರರು (ಹಳದಿ ಪೋಷಾಕು) –ಐಎಸ್‌ಎಲ್ ಮೀಡಿಯಾ ಚಿತ್ರ
ಹೈದರಾಬಾದ್ ಎಫ್‌ಸಿ ತಂಡದ ಆಟಗಾರರು (ಹಳದಿ ಪೋಷಾಕು) –ಐಎಸ್‌ಎಲ್ ಮೀಡಿಯಾ ಚಿತ್ರ   

ಬ್ಯಾಂಬೊಲಿಮ್‌: ಕಳೆದ ಪಂದ್ಯದಲ್ಲಿ ಮುಂಬೈ ಸಿಟಿ ಎದುರು ಸೋತಿರುವ ಹೈದರಾಬಾದ್ ಎಫ್‌ಸಿ ತಂಡವು ಪುಟಿದೇಳುವ ಹಂಬಲದಲ್ಲಿದೆ. ಭಾನುವಾರ ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ ತಂಡವನ್ನು ಎದುರಿಸಲಿದೆ.

ಟೂರ್ನಿಯಲ್ಲಿ ಉಭಯ ತಂಡಗಳು ಇದುವರೆಗೆ ತಲಾ ಆರು ಪಂದ್ಯಗಳನ್ನು ಆಡಿವೆ. ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಹೈದರಾಬಾದ್ ಎಫ್‌ಸಿ, ಕೇರಳ ತಂಡಕ್ಕಿಂತ ಎರಡು ಸ್ಥಾನ ಮುಂದಿದೆ. ಆದರೆ ಎರಡೂ ತಂಡಗಳ ನಡುವೆ ಪಾಯಿಂಟ್‌ಗಳ ಅಂತರ ಆರು ಎಂಬುದು ಗಮನಾರ್ಹ.

ಕೇರಳ ತಂಡ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಅಜೇಯವಾಗಿದ್ದ ಹೈದರಾಬಾದ್ ಕಳೆದ ಪಂದ್ಯದಲ್ಲಷ್ಟೇ ಮುಂಬೈಗೆ ಮಣಿದಿದೆ. ಎದುರಾಳಿಗಳಿಗೆ ಗೋಲು ಬಿಟ್ಟುಕೊಡುವ ದೌರ್ಬಲ್ಯ ಕೇರಳ ತಂಡವನ್ನು ಕಾಡುತ್ತಿದೆ. ಆ ತಂಡವು ಆಕ್ರಮಣ ವಿಭಾಗದಲ್ಲೂ ಉತ್ತಮ ಸಾಮರ್ಥ್ಯ ತೋರಿಲ್ಲ.

ADVERTISEMENT

ತಂಡದಲ್ಲಿ ಸುಧಾರಣೆ ಕಂಡುಬರುವ ವಿಶ್ವಾಸವನ್ನುಬ್ಲಾಸ್ಟರ್ಸ್‌ ಕೋಚ್ ಕಿಬು ವಿಕುನಾ ವ್ಯಕ್ತಪಡಿಸಿದ್ದಾರೆ. ಆದರೆ ಹೈದರಾಬಾದ್ ಎದುರಿನ ಪಂದ್ಯ ಸುಲಭದ ತುತ್ತಲ್ಲ ಎಂದೂ ಹೇಳಿದ್ದಾರೆ.

ಪಂದ್ಯಗಳ ಕೊನೆಯ ಹಂತದಲ್ಲಿ ಹೈದರಾಬಾದ್ ತಂಡದ ಡಿಫೆಂಡಿಂಗ್ ವಿಭಾಗ ದೌರ್ಬಲ್ಯ ಕಾಣುತ್ತಿದೆ. ಅರಿದಾನೆ ಸಂಟಾನ ಆ ತಂಡದ ಶಕ್ತಿಯಾಗಿದ್ದಾರೆ. ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿ ಪೈಪೋಟಿ ನಿರೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.