ADVERTISEMENT

ಸಂತೋಷ್‌ ಟ್ರೋಫಿ ಫುಟ್‌ಬಾಲ್‌: ಕೇರಳಕ್ಕೆ ಏಳನೇ ಕಿರೀಟ

ಪಿಟಿಐ
Published 3 ಮೇ 2022, 12:40 IST
Last Updated 3 ಮೇ 2022, 12:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಲಪ್ಪುರಂ:32 ಬಾರಿಯ ಚಾಂಪಿಯನ್ ಬಂಗಾಳ ತಂಡಕ್ಕೆ ಸೋಲುಣಿಸಿದ ಕೇರಳ ಸಂತೋಷ್‌ ಟ್ರೋಫಿ ಫುಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ. ಆ ತಂಡಕ್ಕೆ ಇದು ಏಳನೇ ಪ್ರಶಸ್ತಿಯಾಗಿದೆ.

ಇಲ್ಲಿಯ ಮಂಜೇರಿ ಪಯ್ಯನಾಡ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಕೇರಳ ಪೆನಾಲ್ಟಿ ಶೂಟೌಟ್‌ನಲ್ಲಿ 5–4ರಿಂದ ಜಯ ಸಾಧಿಸಿತು.

ನಿಗದಿತ ಮತ್ತು ಹೆಚ್ಚುವರಿ ಅವಧಿಯಲ್ಲಿ ಉಭಯ ತಂಡಗಳು 1–1ರಿಂದ ಸಮಬಲ ಸಾಧಿಸಿದ್ದವು. ಇದರಿಂದ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಗಿತ್ತು.

ADVERTISEMENT

ಜಿದ್ದಾಜಿದ್ದಿನ ಹಣಾಹಣಿಯ 97ನೇ ನಿಮಿಷದಲ್ಲಿ ದಿಲೀಪ್ ಒರಾವನ್ ಬಂಗಾಳ ತಂಡಕ್ಕೆ ಡೈವಿಂಗ್ ಹೆಡರ್‌ ಮೂಲಕ ಗೋಲು ದಾಖಲಿಸಿದರು. ಆತಿಥೇಯ ತಂಡ ಸೋಲಿನತ್ತ ಮುಖ ಮಾಡಿದಾಗ ಪ್ರೇಕ್ಷಕರು ಕ್ರೀಡಾಂಗಣದತ್ತ ಬಾಟಲಿಗಳನ್ನು ಎಸೆಯಲಾರಂಭಿಸಿದರು. ಆದರೆ ಹೆಚ್ಚುವರಿ ಅವಧಿಯು ಮುಗಿಯಲು ಕೇವಲ ನಾಲ್ಕು ನಿಮಿಷಗಳಿರುವಾಗ ಬಿಬಿನ್ ಅಜಯನ್‌ ಸೊಗಸಾದ ಹೆಡರ್ ಮೂಲಕ ಗೋಲು ಗಳಿಸಿ ಸಮಬಲಕ್ಕೆ ಕಾರಣರಾದರು.

ರೋಚಕ ಶೂಟೌಟ್‌ನಲ್ಲಿ ಕೇರಳ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು. 2016–17ರ ಆವೃತ್ತಿಯಲ್ಲಿ ಬಂಗಾಳ ತಂಡವು ತವರಿನಲ್ಲಿ ಕೇರಳಕ್ಕೆ ಮಣಿದಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ತಂಡದ ಆಸೆ ಈಡೇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.