
ಲಯೊನೆಲ್ ಮೆಸ್ಸಿ
ಕೃಪೆ: ರಾಯಿಟರ್ಸ್
ಕೋಲ್ಕತ್ತ: ಅರ್ಜೆಂಟೀನಾ ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಅವರು ಭಾರತ ಪ್ರವಾಸದ ಸಂದರ್ಭದಲ್ಲಿ ಸತ್ಕಾರ್ಯದ ಉದ್ದೇಶದಿಂದ ಮುಂಬೈನಲ್ಲಿ ರ್‍ಯಾಂಪ್ ಮೇಲೆ ಹೆಜ್ಜೆಹಾಕಲಿದ್ದಾರೆ.
2022ರ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ದೊರೆತ ಸ್ಮರಣಿಕೆಗಳಲ್ಲಿ ಆಯ್ದ ಕೆಲವನ್ನು ಹರಾಜಿಗಾಗಿ ತರುವಂತೆಯೂ ಮೆಸ್ಸಿ ಅವರಿಗೆ ಆಯೋಜಕರು ಮನವಿ ಮಾಡಿದ್ದಾರೆ. ಮೆಸ್ಸಿ ಜೊತೆಗೆ ಅವರ ದೀರ್ಘ ಕಾಲದ ಸಹ ಆಟಗಾರ ಲೂಯಿಸ್ ಸೊರೇಝ್ ಮತ್ತು ಅರ್ಜೆಂಟೀನಾದ ಮಿಡ್‌ಫೀಲ್ಡರ್ ರಾಡ್ರಿಗೊ ಡಿ ಪಾಲ್ ಅವರೂ ಡಿಸೆಂಬರ್ 14ರ ರಾತ್ರಿ ನಡೆಯಲಿರುವ ಕಾರ್ಯಕ್ರಮದ ಫ್ಯಾಷನ್ ಶೋ ವೇಳೆ ಹೆಜ್ಜೆಹಾಕಲಿದ್ದಾರೆ ಎಂದು ‘ಗೋಟ್’ (ಜಿಒಎಟಿ– ಗ್ರೇಟೆಸ್ಟ್ ಆಫ್ ಆಲ್ ಟೈಮ್) ಭಾರತ ಪ್ರವಾಸದ ಆಯೋಜಕ ಸತದ್ರು ದತ್ತಾ ಪಿಟಿಐಗೆ ಮಂಗಳವಾರ ತಿಳಿಸಿದ್ದಾರೆ.
ಇದೊಂದು ಸದುದ್ದೇಶದ ಸಹಾಯಾರ್ಥ ಫ್ಯಾಷನ್ ಶೋ ಆಗಿದೆ ಎಂದಿದ್ದಾರೆ. ಅಂದು ಹೆಸರಾಂತ ರೂಪದರ್ಶಿಗಳು, ಖ್ಯಾತನಾಮ ಕ್ರಿಕೆಟಿಗರು, ಬಾಲಿವುಡ್ ತಾರೆಯರು, ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದರು.
ಸೊರೇಝ್ ಅವರು ಸ್ಪ್ಯಾನಿಷ್ ಸಂಗೀತ ಸಂಜೆಯ ಭಾಗವಾಗಿರಲಿದ್ದಾರೆ. ಮುಂಬೈನ ಕಾರ್ಯಕ್ರಮ ಸಂಜೆ 5 ಗಂಟೆಗೆ ಆರಂಭವಾಗಲಿದೆ. ಮಧ್ಯಾಹ್ನ 3.30ಕ್ಕೆ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಸಹಾಯಾರ್ಥ ಪಂದ್ಯ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.