ADVERTISEMENT

ಫುಟ್‌ಬಾಲ್‌: ಲಕ್ಕಿ ಸ್ಟಾರ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 20:19 IST
Last Updated 7 ಏಪ್ರಿಲ್ 2019, 20:19 IST

ಬೆಂಗಳೂರು: ನ್ಯೂ ಲಕ್ಕಿ ಸ್ಟಾರ್‌ ಎಫ್‌ಸಿ ತಂಡ, ಬಿಡಿಎಫ್‌ಎ ‘ಸಿ’ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಭಾನು ವಾರದ ಪಂದ್ಯದಲ್ಲಿ ಗೆದ್ದಿದೆ.

‘ಸಿ’ ವಲಯದ ಹಣಾಹಣಿಯಲ್ಲಿ ಲಕ್ಕಿ ಸ್ಟಾರ್‌ 1–0 ಗೋಲಿನಿಂದ ಬೆಂಗಳೂರು ವಾರಿಯರ್ಸ್‌ ತಂಡವನ್ನು ಮಣಿಸಿತು. ಆಲ್ಬರ್ಟ್‌ 32ನೇ ನಿಮಿಷದಲ್ಲಿ ಗೋಲು ಗಳಿಸಿದರು.

ವಿವೇಕಾನಂದ ಎಫ್‌ಸಿ 4–2 ಗೋಲುಗಳಿಂದ ಯಂಗ್‌ ಬಾಯ್ಸ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ADVERTISEMENT

ವಿಜಯೀ ತಂಡದ ವಿಶಾಲ್‌ 15 ಮತ್ತು 20ನೇ ನಿಮಿಷಗಳಲ್ಲಿ ಗೋಲು ಹೊಡೆದರು. ಪೃಥ್ವಿ (53) ಮತ್ತು ಅಬ್ರಾಹಂ (59) ಕೂಡಾ ಮಿಂಚಿದರು.

ಕ್ವೀನ್ಸ್‌ ಸ್ಟಾರ್‌ ಎಫ್‌ಸಿ ಮತ್ತು ಫ್ರೆಂಡ್ಸ್‌ ಯುನೈಟೆಡ್‌ ಎಫ್‌ಸಿ ನಡುವಣ ಪಂದ್ಯ 2–2 ಗೋಲುಗಳಿಂದ ಡ್ರಾ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.