ADVERTISEMENT

ಆಸ್ಟ್ರಿಯಾ ಫುಟ್‌ಬಾಲ್ ತಂಡಕ್ಕೆ ರಾಲ್ಫ್ ಕೋಚ್

ಏಜೆನ್ಸೀಸ್
Published 29 ಏಪ್ರಿಲ್ 2022, 13:22 IST
Last Updated 29 ಏಪ್ರಿಲ್ 2022, 13:22 IST
ರಾಲ್ಫ್ ರಾಂಗ್ನಿಕ್ –ಎಎಫ್‌ಪಿ ಚಿತ್ರ
ರಾಲ್ಫ್ ರಾಂಗ್ನಿಕ್ –ಎಎಫ್‌ಪಿ ಚಿತ್ರ   

ವಿಯೆನ್ನಾ: ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನ ಕೋಚ್‌ ರಾಲ್ಫ್ ರಾಂಗ್ನಿಕ್ ಅವರನ್ನು ಆಸ್ಟ್ರಿಯಾ ರಾಷ್ಟ್ರೀಯ ಫುಟ್‌ಬಾಲ್ ತಂಡದ ಕೋಚ್ ಆಗಿ ನೇಮಕ ಮಾಡಲಾಗಿದೆ.

ಆಸ್ಟ್ರಿಯಾ ಫುಟ್‌ಬಾಲ್ ಫೆಡರೇಷನ್ ಶುಕ್ರವಾರ ಈ ವಿಷಯ ತಿಳಿಸಿದೆ. ರಾಲ್ಫ್ ಸದ್ಯ ಸಲಹೆಗಾರರಾಗಿ ತಂಡದೊಂದಿಗೆ ಇರುವರು ಎಂದು ಕೂಡ ವಿವರಿಸಲಾಗಿದೆ. ಮ್ಯಾಂಚೆಸ್ಟರ್ ಯುನೈಟೆಡ್‌ನಲ್ಲಿ ಕಳೆದ ವರ್ಷ ನವೆಂಬರ್‌ನಿಂದ ಅವರು ಮಧ್ಯಂತರ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜರ್ಮನ್‌ನವರಾದ63 ವರ್ಷದ ರಾಲ್ಫ್‌ ಅವರನ್ನು ಎರಡು ವರ್ಷಗಳ ಅವಧಿಗೆ ಆಸ್ಟ್ರಿಯಾ ನೇಮಕ ಮಾಡಿಕೊಂಡಿದೆ. 2024ರ ಯುರೋಪಿಯನ್‌ ಚಾಂಪಿಯನ್‌ಷಿಪ್‌ಗೆ ತಂಡ ಅರ್ಹತೆ ಗಳಿಸಿದರೆ ಈ ಅವಧಿಯನ್ನು ನಾಲ್ಕು ವರ್ಷಗಳ ವರೆಗೆ ಮುಂದುವರಿಯುವ ಸಾಧ್ಯತೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.