ADVERTISEMENT

ಚಾಂಪಿಯನ್ಸ್ ಲೀಗ್‌ ಫುಟ್‌ಬಾಲ್: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಮ್ಯಾಂಚೆಸ್ಟರ್ ಸಿಟಿ

ಅಟ್ಲೆಟಿಕೊ ಎದುರಿನ ಎರಡನೇ ಲೆಗ್‌ ಪಂದ್ಯ ಡ್ರಾ

ಏಜೆನ್ಸೀಸ್
Published 14 ಏಪ್ರಿಲ್ 2022, 14:48 IST
Last Updated 14 ಏಪ್ರಿಲ್ 2022, 14:48 IST
ಅಟ್ಲೆಟಿಕೊ ತಂಡದ ಏಂಜೆಲ್ ಕೊರಿಯ ಅವರು ಚೆಂಡಿನೊಂದಿಗೆ ಮುನ್ನುಗ್ಗಿದ ಪರಿ –ಎಎಫ್‌ಪಿ ಚಿತ್ರ
ಅಟ್ಲೆಟಿಕೊ ತಂಡದ ಏಂಜೆಲ್ ಕೊರಿಯ ಅವರು ಚೆಂಡಿನೊಂದಿಗೆ ಮುನ್ನುಗ್ಗಿದ ಪರಿ –ಎಎಫ್‌ಪಿ ಚಿತ್ರ   

ಮ್ಯಾಡ್ರಿಡ್: ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಹೊತ್ತುಕೊಂಡಿರುವ ಮ್ಯಾಂಚೆಸ್ಟರ್ ಸಿಟಿ ತಂಡ ಚಾಂಪಿಯನ್ಸ್ ಲೀಗ್‌ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.

ಗುರುವಾರ ಅಟ್ಲೆಟಿಕೊ ಮ್ಯಾಡ್ರಿಡ್ ತಂಡದ ಎದುರು ನಡೆದ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಡ್ರಾ ಸಾಧಿಸಿತು. ಮೊದಲ ಲೆಗ್‌ನ ಪಂದ್ಯದಲ್ಲಿ ಅಟ್ಲೆಟಿಕೊ ಎದುರು 1–0 ಅಂತರದಿಂದ ಜಯ ಗಳಿಸಿದ್ದು ತಂಡದ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿತು.

ಪಂದ್ಯದಲ್ಲಿ ಅಟ್ಲೆಟಿಕೊ ಎಚ್ಚರಿಕೆಯ ಆಟವಾಡಿ ಗೋಲು ಗಳಿಸಲು ಪ್ರಯತ್ನಿಸಿತು. ಮೊದಲ ಲೆಗ್‌ನಲ್ಲಿ ಸೋತಿರುವ ಕಾರಣ ಸೆಮಿಫೈನಲ್ ಹಾದಿ ಸುಗಮವಾಗಬೇಕಾದರೆ ಈ ಪಂದ್ಯದಲ್ಲಿ ಆ ತಂಡ ಉತ್ತಮ ಅಂತರದಲ್ಲಿ ಜಯ ಗಳಿಸಬೇಕಾಗಿತ್ತು. ಮ್ಯಾಂಚೆಸ್ಟರ್ ಸಿಟಿ ರಕ್ಷಣೆಗೆ ಒತ್ತು ಕೊಟ್ಟು ಕಣಕ್ಕೆ ಇಳಿದಿತ್ತು. ಆ ತಂತ್ರದಲ್ಲಿ ಯಶಸ್ಸು ಗಳಿಸಿತು ಕೂಡ.

ADVERTISEMENT

ಮೊದಲ ಲೆಗ್‌ನಲ್ಲಿ ಒಮ್ಮೆಯೂ ಗುರಿಯತ್ತ ಚೆಂಡನ್ನು ಸಾಗಿಸಲು ಸಾಧ್ಯವಾಗದೇ ಇದ್ದ ಅಟ್ಲೆಟಿಕೊ ಈ ಪಂದ್ಯದಲ್ಲಿ ಮೂರು ಬಾರಿ ಎದುರಾಳಿ ತಂಡದ ಆವರಣದಲ್ಲಿ ಆತಂಕ ಸೃಷ್ಟಿಸಿತು. ಆದರೆ ಒಮ್ಮೆಯೂ ಚೆಂಡನ್ನು ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.