ADVERTISEMENT

Football: ಮಿನರ್ವ ಮುಡಿಗೆ ಸುಬ್ರತೊ ಕಪ್‌

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 20:10 IST
Last Updated 11 ಸೆಪ್ಟೆಂಬರ್ 2025, 20:10 IST
   

ಬೆಂಗಳೂರು: ಮೊಹಾಲಿಯ ಮಿನರ್ವ ಪಬ್ಲಿಕ್‌ ಸ್ಕೂಲ್‌ (ಸಿಐಎಸ್‌ಸಿಇ) ತಂಡವು 64ನೇ ಆವೃತ್ತಿಯ ಸುಬ್ರತೊ ಕಪ್‌ ಸಬ್‌ ಜೂನಿಯರ್‌ ಬಾಲಕರ (15 ವರ್ಷದೊಳಗಿನ) ಅಂತರರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಯಲಹಂಕದ ವಾಯುನೆಲೆಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಫೈನಲ್‌ ಪಂದ್ಯದಲ್ಲಿ ಮಿನರ್ವ 6–0 ಗೋಲುಗಳ ಅಂತರದಿಂದ ವಿದ್ಯಾಚಲ್ ಇಂಟರ್‌ನ್ಯಾಷನಲ್ ಸ್ಕೂಲ್ (ಬಿಹಾರ) ತಂಡವನ್ನು ಸುಲಭವಾಗಿ ಮಣಿಸಿತು. 

ಮಿನರ್ವ ಪರ ಮಹೇಶ್‌ (4ನೇ ಮತ್ತು 50+1ನೇ ನಿಮಿಷ), ಲೆಟ್ಗೌಹಾವ್ ಕಿಪ್ಜನ್ (19ನೇ ಮತ್ತು 35ನೇ) ತಲಾ ಎರಡು ಗೋಲು ಗಳಿಸಿದರು. ಬಿಕ್ಸನ್‌ (37ನೇ) ಮತ್ತು ರಿಮೋಸನ್‌ (42ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. 

ADVERTISEMENT

ಚಾಂಪಿಯನ್‌ ಮಿನರ್ವ ತಂಡವು ₹4 ಲಕ್ಷ ಬಹುಮಾನವನ್ನು
ತನ್ನದಾಗಿಸಿಕೊಂಡಿತು. ರನ್ನರ್‌ ಅಪ್‌ ವಿದ್ಯಾಚಲ್ ತಂಡ ₹ 2 ಲಕ್ಷ ಬಹುಮಾನ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.