ADVERTISEMENT

ಚೆಟ್ರಿಗೆ ಪರ್ಯಾಯವಿಲ್ಲ: ಸ್ಟಿಮ್ಯಾಕ್

ಪಿಟಿಐ
Published 21 ನವೆಂಬರ್ 2019, 20:01 IST
Last Updated 21 ನವೆಂಬರ್ 2019, 20:01 IST
ಸುನಿಲ್ ಚೆಟ್ರಿ –ಪಿಟಿಐ ಚಿತ್ರ
ಸುನಿಲ್ ಚೆಟ್ರಿ –ಪಿಟಿಐ ಚಿತ್ರ   

ನವದೆಹಲಿ: ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿಗೆ 35 ವರ್ಷ ವಯಸ್ಸಾದರೂ 29 ವರ್ಷದವರಂತೆ ಉತ್ಸಾಹದಿಂದ ಆಡುತ್ತಿದ್ದಾರೆ. ಆದ್ದರಿಂದ ಕೆಲವು ವರ್ಷಗಳ ವರೆಗೆ ಅವರಿಗೆ ಪರ್ಯಾಯ ಹುಡುಕುವ ಅಗತ್ಯವೇ ಇಲ್ಲ ಎಂದು ಕೋಚ್ ಇಗೊರ್ ಸ್ಟಿಮ್ಯಾಕ್ ಅಭಿಪ್ರಾಯಪಟ್ಟರು.

ಐ–ಲೀಗ್ ಟೂರ್ನಿಯ ಉದ್ಘಾಟನೆಯ ಅಂಗವಾಗಿ ಅವರು ಸುದ್ದಿಸಂಸ್ಥೆಯ ಜೊತೆ ಮಾತನಾಡಿದರು.

ಕೆಲವು ವರ್ಷಗಳಿಂದ ಸುನಿಲ್ ಚೆಟ್ರಿ ಅಮೋಘ ಆಟ ಆಡುತ್ತಿದ್ದಾರೆ. ಆದರೆ ಇತ್ತೀಚೆಗೆ ಗೋಲು ಗಳಿಸಲಾಗದೆ ಪರದಾಡುತ್ತಿದ್ದಾರೆ. ವಿಶ್ವಕಪ್ ಅರ್ಹತಾ ಸುತ್ತಿನ 5 ಪಂದ್ಯಗಳಲ್ಲಿ ಕೇವಲ ಒಂದೇ ಗೋಲು ದಾಖಲಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಒಮನ್ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಈ ಗೋಲು ಗಳಿಸಿದ್ದರು. ಆ ಪಂದ್ಯದಲ್ಲಿ ಭಾರತ 1–2 ಅಂತರದಲ್ಲಿ ಸೋತಿತ್ತು. ನಂತರದ 4 ಪಂದ್ಯಗಳಲ್ಲೂ ಭಾರತಕ್ಕೆ ನಿರೀಕ್ಷಿತ ಸಾಧನೆ ಸಾಮರ್ಥ್ಯ ತೋರಲು ಆಗಲಿಲ್ಲ. ಹೀಗಾಗಿ ವಿಶ್ವಕಪ್ ಅರ್ಹತಾ ಸುತ್ತಿನಿಂದ ತಂಡ ಹೊರಬಿದ್ದಿದೆ.

ADVERTISEMENT

ಭಾರತದಲ್ಲಿ ಯಾವುದಾದರೂ ಆಟಗಾರ ಸುನಿಲ್ ಚೆಟ್ರಿಗೆ ಬದಲಿಯಾಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂದು ಸ್ಟಿಮ್ಯಾಕ್ ಅವರನ್ನು ಕೇಳಿದಾಗ ‘ಸುನಿಲ್ ಚೆಟ್ರಿಗೆ ಬದಲಿ ಆಟಗಾರನನ್ನು ಹುಡುಕುವ ಅಗತ್ಯವೇ ಇಲ್ಲ. ಅವರು ಫಿಟ್‌ನೆಸ್ ಕಾಪಾಡಿಕೊಂಡು ಚೆನ್ನಾಗಿಯೇ ಆಡುತ್ತಿದ್ದಾರೆ. ಅವರು ಭಾರತ ತಂಡದ ದೊಡ್ಡ ಆಸ್ತಿ’ ಎಂದರು.

‘ಗಾಯದ ಸಮಸ್ಯೆಗಳು ಭಾರತ ತಂಡ ವಿಶ್ವಕಪ್ ಅರ್ಹತಾ ಸುತ್ತಿನಿಂದ ಹೊರಬೀಳಲು ಕಾರಣವಾದವು. ಒಮನ್‌ನಲ್ಲಿ ಕಳೆದ ವಾರ ನಡೆದ ಪಂದ್ಯದಲ್ಲಿ ಸೋತ ಕಾರಣ ನಿರಾಸೆಯಾಗಿದೆ. ಆದರೂ ಭರವಸೆಯನ್ನು ಕೈಚೆಲ್ಲಲಿಲ್ಲ. ಮುಂದಿನ ದಿನಗಳಲ್ಲಿ ತಂಡ ಹೆಚ್ಚು ಸಮರ್ಥವಾಗಿ ಆಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.