ADVERTISEMENT

ಪ್ಲೇ ಆಫ್‌ಗೆ ಚೆನ್ನೈಯಿನ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 19:30 IST
Last Updated 21 ಫೆಬ್ರುವರಿ 2020, 19:30 IST

ಮುಂಬೈ: ಲೂಸಿಯನ್‌ ಗೋಯನ್‌ 83ನೇ ನಿಮಿಷಗಳಿಸಿದ ಗೋಲಿನಿಂದ ಚೆನ್ನೈಯಿನ್‌ ಎಫ್‌ಸಿ ತಂಡ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಶುಕ್ರವಾರ ಮುಂಬೈ ಸಿಟಿ ಎಫ್‌ಸಿ ತಂಡವನ್ನು 1–0 ಅಂತರದಿಂದ ಸೋಲಿಸಿತು.

ಈ ಗೆಲುವಿನಿಂದ ಚೆನ್ನೈಯಿನ್‌ (17 ಪಂದ್ಯಗಳಿಂದ 28 ಪಾಯಿಂಟ್ಸ್‌) ಪ್ಲೇ ಆಫ್‌ಗೆ ಅರ್ಹತೆ ಪಡೆಯಿತು. ಮುಂಬೈ ಫುಟ್‌ಬಾಲ್‌ ಅರೇನಾದಲ್ಲಿ ನಡೆದ ಈ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿತ್ತು.

ಸೋಲಿನಿಂದ ಮುಂಬೈ (18 ಪಂದ್ಯಗಳಿಂದ 26) ತಂಡದ ಪ್ಲೇ ಆಫ್‌ ಕನಸು ಭಗ್ನಗೊಂಡಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.