ADVERTISEMENT

ಫುಟ್‌ಬಾಲ್‌ ಫಿಫಾ ರ್‍ಯಾಂಕಿಂಗ್‌: 136ನೇ ಸ್ಥಾನಕ್ಕಿಳಿದ ಭಾರತ

ಪಿಟಿಐ
Published 17 ಅಕ್ಟೋಬರ್ 2025, 14:58 IST
Last Updated 17 ಅಕ್ಟೋಬರ್ 2025, 14:58 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ನವದೆಹಲಿ: ಭಾರತ ಪುರುಷರ ಫುಟ್‌ಬಾಲ್‌ ತಂಡ, ಶುಕ್ರವಾರ ಪ್ರಕಟವಾದ ಫಿಫಾ ರ್‍ಯಾಂಕಿಂಗ್‌ನಲ್ಲಿ 136ನೇ ಸ್ಥಾನಕ್ಕೆ ಕುಸಿದಿದೆ. 9 ವರ್ಷಗಳಲ್ಲಿ ಇದೇ ಮೊದಲ ಬಾರಿ ಭಾರತ ರ‍್ಯಾಂಕಿಂಗ್‌ನಲ್ಲಿ ಈ ಮಟ್ಟಕ್ಕೆ ಇಳಿದಿದೆ.

ಈ ಹಿಂದಿನ ರ್‍ಯಾಂಕಿಂಗ್‌ನಲ್ಲಿ ಭಾರತ 134ನೇ ಸ್ಥಾನದಲ್ಲಿದಲ್ಲಿತ್ತು. ಎರಡು ದಿನಗಳ ಹಿಂದೆಯಷ್ಟೇ ಭಾರತ ತಂಡವು ಎಎಫ್‌ಸಿ ಏಷ್ಯನ್ ಕಪ್ ರ‍್ಯಾಂಕಿಂಗ್‌ನಲ್ಲಿ ಸಿಂಗಪುರಕ್ಕೆ ಸೋತು, ಪ್ರಧಾನ ಸುತ್ತಿಗೆ ತಲುಪುವ ಕ್ಷೀಣ ಅವಕಾಶವನ್ನೂ ಕಳೆದುಕೊಂಡಿತ್ತು. ಭಾರತವು, ಕುವೈತ್‌ಗಿಂತ ಒಂದು ಸ್ಥಾನ ಕೆಳಗಿದ್ದು, ಬೋಟ್ಸ್‌ವಾನಾಗಿಂತ ಒಂದು ಸ್ಥಾನ ಮೇಲಿದೆ.

ADVERTISEMENT

2016ರ ಅಕ್ಟೋಬರ್‌ನಲ್ಲಿ ಭಾರತ 137ನೇ ಸ್ಥಾನಕ್ಕೆ ಇಳಿದಿದ್ದು, ಈವರೆಗಿನ ಕಳಪೆ ಎನಿಸಿದೆ. 1996ರ ಫೆಬ್ರುವರಿಯಲ್ಲಿ 94ನೇ ಸ್ಥಾನಕ್ಕೇರಿದ್ದು ಇದುವರೆಗಿನ ಅತ್ಯುತ್ತಮ ಸಾಧನೆ ಎನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.