ADVERTISEMENT

ಪಿಎಸ್‌ಜಿ ಆಟಗಾರ್ತಿ ಮೇಲೆ ಹಲ್ಲೆ: ಬಂಧನ

ಏಜೆನ್ಸೀಸ್
Published 27 ಏಪ್ರಿಲ್ 2022, 14:32 IST
Last Updated 27 ಏಪ್ರಿಲ್ 2022, 14:32 IST
ಖೈರಾ ಹಮ್ರೊಯ್ (ಎಡ) –ಎಎಫ್‌ಪಿ ಚಿತ್ರ
ಖೈರಾ ಹಮ್ರೊಯ್ (ಎಡ) –ಎಎಫ್‌ಪಿ ಚಿತ್ರ   

ವೆರ್ಸಾಯ್ಲಿಸ್‌: ಪ್ಯಾರಿಸ್ ಸೇಂಟ್ ಜರ್ಮನ್ ಕ್ಲಬ್‌ನ ಮಹಿಳಾ ತಂಡದ ಸದಸ್ಯೆ ಖೈರಾ ಹಮ್ರೊಯ್ ಮೇಲೆ ರಸ್ತೆಯಲ್ಲಿ ಹಲ್ಲೆ ನಡೆಸಿದ ಶಂಕೆಯ ಮೇಲೆ ವ್ಯಕ್ತಿಯೊಬ್ಬನನ್ನು ಫ್ರೆಂಚ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಫ್ರಾನ್ಸ್ ರಾಜಧಾನಿಯಲ್ಲಿ ಕಳೆದ ವರ್ಷ ನಡೆದ ಘಟನೆಯಲ್ಲಿ ಹಮ್ರೊಯಿ ಅವರನ್ನು ಕಾರಿನಿಂದ ಹೊರಗೆಳೆದು ಕಬ್ಬಿಣದ ಸಲಾಕೆಯಿಂದ ಕಾಲಿಗೆ ಬಡಿಯಲಾಗಿತ್ತು. ಬಂಧಿತ ವ್ಯಕ್ತಿಯು ಹಮ್ರೊಯಿ ಅವರ ಜೊತೆಗೆ ತಂಡದಲ್ಲಿ ಆಡುತ್ತಿದ್ದ ಅಮಿನತ ಡಯಾಲೊ ಅವರ ಗೆಳೆಯ ಎಂದು ಮೂಲಗಳು ತಿಳಿಸಿವೆ.

ನವೆಂಬರ್‌ 4ರಂದು ರಾತ್ರಿ ಕ್ಲಬ್ ಒಂದರಲ್ಲಿ ನಡೆದ ಡಿನ್ನರ್ ಮುಗಿಸಿ ವಾಪಸಾಗುತ್ತಿದ್ದ ವೇಳೆ ಆಕ್ರಮಣ ನಡೆದಿತ್ತು. ಆಗ ಡಯಾಲೊ ಅವರೇ ಕಾಲು ಚಲಾಯಿಸುತ್ತಿದ್ದರು. ಕ್ರೀಡೆಯಲ್ಲಿ ಉಂಟಾಗಿರುವ ವೈಷಮ್ಯವೇ ಹಲ್ಲೆಗೆ ಕಾರಣವಾಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಇಬ್ಬರೂ ಫ್ರಾನ್ಸ್ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.