ADVERTISEMENT

ಸ್ಯಾಫ್‌ 18 ವರ್ಷದೊಳಗಿನವರ ಚಾಂಪಿಯನ್‌ಷಿಪ್‌: ಭಾರತಕ್ಕೆ ಬಾಂಗ್ಲಾ ಸವಾಲು

ಪಿಟಿಐ
Published 22 ಸೆಪ್ಟೆಂಬರ್ 2019, 17:02 IST
Last Updated 22 ಸೆಪ್ಟೆಂಬರ್ 2019, 17:02 IST

ಕಠ್ಮಂಡು, ನೇಪಾಳ: ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಭಾರತ 18 ವರ್ಷದೊಳಗಿನವರ ಫುಟ್‌ಬಾಲ್‌ ತಂಡ ಸ್ಯಾಫ್‌ ಚಾಂಪಿಯನ್‌ಷಿಪ್‌ನ ತನ್ನ ಮೊದಲ ಪಂದ್ಯದಲ್ಲಿಸೋಮವಾರ ಬಾಂಗ್ಲಾದೇಶ ಸವಾಲಿಗೆ ಸಜ್ಜಾಗಿದೆ.

‘ತಾನಾಡಿದ ಮೊದಲ ಪಂದ್ಯದಲ್ಲಿಬಾಂಗ್ಲಾ ತಂಡವು ಶ್ರೀಲಂಕಾವನ್ನು 3–0ಯಿಂದ ಮಣಿಸಿದೆ. ಹಾಗಾಗಿ ಆ ತಂಡದ ಎದುರು ಮೈಮರೆಯುವಂತಿಲ್ಲ’ ಎಂದು ಭಾರತ 19 ವರ್ಷದೊಳಗಿನವರ ಫುಟ್‌ಬಾಲ್‌ ತಂಡದ ಕೋಚ್‌ ಫ್ಲಾಯ್ಡ್‌ ಪಿಂಟೊ ಹೇಳಿದ್ದಾರೆ.

‘ಸವಾಲಿಗೆ ನಾವು ಸಜ್ಜಾಗಿದ್ದೇವೆ. ಆಟದ ತೀವ್ರತೆಯ ಕಡೆ ಗಮನ ನೀಡಬೇಕು. ಈ ಹಿಂದೆ ತೋರಿದ ಉತ್ತಮ ಆಟವನ್ನು ಮುಂದುವರಿಸಬೇಕು’ ಎಂದೂ ಅವರು ನುಡಿದರು.

ADVERTISEMENT

‘ 19 ವರ್ಷದೊಳಗಿನವರ ಎಎಫ್‌ಸಿ ಕ್ವಾಲಿಫೈಯರ್ಸ್‌ ಟೂರ್ನಿಗೆ ನಾವು ಸಜ್ಜಾಗಬೇಕಿದೆ. ಈ ಸಮಯದಲ್ಲಿ ತಂಡದ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರಿಯಲು ಸ್ಯಾಫ್‌ ಚಾಂಪಿಯನ್‌ಷಿಪ್‌ ಉತ್ತಮ ಅವಕಾಶವಾಗಿದೆ’ ಎಂದು ತಂಡದ ಸಹಾಯಕ ಕೋಚ್‌ ಮಹೇಶ್‌ ಗಾವ್ಳಿ ಅಭಿಪ್ರಾಯಪಟ್ಟರು.

‘ತಂಡದಲ್ಲಿ ನಾಯಕತ್ವದ ಕೊರತೆಯಿಲ್ಲ. ಒತ್ತಡದಲ್ಲೂ ತಂಡವನ್ನು ಮುನ್ನಡೆಸುವ ಹಲವು ಆಟಗಾರರಿದ್ದಾರೆ. ನಾವು ಇಲ್ಲಿ ಗೆಲುವು ಸಾಧಿಸಲಿದ್ದೇವೆ’ ಎಂದು ತಂಡದ ಗೋಲ್‌ಕೀಪರ್‌ ಪ್ರಭಶುಕನ್‌ ಗಿಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.