ADVERTISEMENT

ಸ್ಯಾಫ್‌ ಫುಟ್‌ಬಾಲ್‌: ಭಾರತದ ಶುಭಾರಂಭ

ಪಿಟಿಐ
Published 16 ಸೆಪ್ಟೆಂಬರ್ 2025, 16:17 IST
Last Updated 16 ಸೆಪ್ಟೆಂಬರ್ 2025, 16:17 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಕೊಲಂಬೊ: ಹಾಲಿ ಚಾಂಪಿಯನ್‌ ಭಾರತ ತಂಡ, 17 ವರ್ಷದೊಳಗಿನವರ ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಬಿ ಗುಂಪಿನ ಪಂದ್ಯದಲ್ಲಿ ಮಾಲ್ಡೀವ್ಸ್‌ ತಂಡವನ್ನು ಮಂಗಳವಾರ 6–0 ಗೋಲುಗಳಿಂದ ಸೋಲಿಸಿ ಭರ್ಜರಿ ಆರಂಭ ಮಾಡಿತು.

ಆರಂಭದಿಂದಲೇ ಪಡೆದ ಹಿಡಿತವನ್ನು ಭಾರತ ಕಿರಿಯರ ತಂಡ ಕೊನೆಯವರೆಗೆ ಉಳಿಸಿಕೊಂಡಿತು. ದಲ್ಲಾಲಮುವೊನ್ ಗಂಗ್ಟೆ (12, 68ನೇ ನಿಮಿಷ), ಹೃಷಿಕೇಶ್‌ ಚರಣ್  (29ನೇ), ಕಮ್ಗುಹಾವೊ ಡಂಜೆಲ್ (49ನೇ), ವಾಂಗ್‌ಕಿರಾಕ್‌ಪಮ್ ಗನ್ಲೀಬಾ (58ನೇ) ಮತ್ತು ಆಝಿಮ್ ಪರ್ವೀಝ್ ನಜರ್ (86ನೇ ನಿಮಿಷ) ಗೋಲುಗಳನ್ನು ಗಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.