
ಪಿಟಿಐ
ಫುಟ್‌ಬಾಲ್
ಪೋಖರಾ (ನೇಪಾಳ): ಪರ್ಲ್ ಫೆರ್ನಾಂಡಿಸ್ ಅವರ ಆಟದ ನೆರವಿನಿಂದ ಭಾರತ ತಂಡವು ಶನಿವಾರ ಸ್ಯಾಫ್ (ದಕ್ಷಿಣ ಏಷ್ಯಾ ಫುಟ್‌ಬಾಲ್ ಫೆಡರೇಷನ್) 19 ವರ್ಷದೊಳಗಿನ ಬಾಲಕಿಯರ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ 1–0 ಗೋಲಿನಿಂದ ನೇಪಾಳ ತಂಡವನ್ನು ಮಣಿಸಿ ಶುಭಾರಂಭ ಮಾಡಿತು.
ಪೋಖರಾ ರಂಗಶಾಲಾ ಕ್ರೀಡಾಂಗಣ ದಲ್ಲಿ ನಡೆದ ಪಂದ್ಯದಲ್ಲಿ ಪರ್ಲ್ ಅವರು 49ನೇ ನಿಮಿಷದಲ್ಲಿ ಹೊಡೆದ ಗೋಲು ಗೆಲುವಿಗೆ ನಿರ್ಣಾಯಕವಾಯಿತು.
ದಿನದ ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶ 12–0ಯಿಂದ ಭೂತಾನ್ ತಂಡವನ್ನು ಮಣಿಸಿತು. ಭಾರತ ಫೆ.2ರಂದು ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.