ADVERTISEMENT

ಸ್ಯಾಫ್ ಫುಟ್‌ಬಾಲ್‌: ಭಾರತ ಮಹಿಳಾ ತಂಡ ಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 14:34 IST
Last Updated 4 ಫೆಬ್ರುವರಿ 2026, 14:34 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಪೊಖಾರಾ (ನೇಪಾಳ): ಭಾರತ ಯುವ ಮಹಿಳಾ ತಂಡವು ತನ್ನ  ಕೊನೆಯ ರೌಂಡ್‌ರಾಬಿನ್ ಪಂದ್ಯದಲ್ಲಿ ಬುಧವಾರ 8–0 ಗೋಲುಗಳಿಂದ ಭೂತಾನ್ ತಂಡವನ್ನು ಸದೆಬಡಿದು ಸ್ಯಾಫ್‌ 19 ವರ್ಷದೊಳಗಿನರ ಫುಟ್‌ಬಾಲ್ ಟೂರ್ನಿಯ ಫೈನಲ್ ತಲುಪಿತು. ಶನಿವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.

ಭಾರತದ 17 ವರ್ಷದೊಳಗಿನವರ ತಂಡ ಈ ಟೂರ್ನಿಯಲ್ಲಿ ಕಣಕ್ಕಿಳಿದಿದೆ.

ADVERTISEMENT

ರಂಗಸಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪರ್ಲ್‌ ಫೆರ್ನಾಂಡಿಸ್‌ 16, 39 ಮತ್ತು 41ನೇ ನಿಮಿಷ ಗೋಲು ಹೊಡೆದು ವಿರಾಮಕ್ಕೆ ಮೊದಲೇ ಹ್ಯಾಟ್ರಿಕ್ ಪೂರೈಸಿದರು. ಪ್ರೀತಿಕಾ ಬರ್ಮನ್ (25, 90ನೇ ನಿಮಿಷ) ಎರಡು ಗೋಲು ಗಳಿಸಿದರೆ, ಅಲಿಶಾ ಲಿಂಗ್ಡೊ (6ನೇ), ಅಭಿಷ್ಟಾ ಬಸ್ನೆಟ್‌ (10ನೇ) ಮತ್ತು ದಿವ್ಯಾನಿ ಲಿಂಡಾ (17ನೇ ನಿಮಿಷ) ಉಳಿದ ಗೋಲುಗಳನ್ನು ಗಳಿಸಿದರು.

ನಂತರ ನಡೆದ ಇನ್ನೊಂದು ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ಯುವ ತಂಡವು 4–0 ಗೋಲುಗಳಿಂದ ಆತಿಥೇಯ ನೇಪಾಳ ತಂಡವನ್ನು ಸೋಲಿಸಿತು.

ಭಾರತ ತಂಡ 3 ಪಂದ್ಯಗಳಿಂದ 6 ಪಾಯಿಂಟ್ಸ್ ಸಂಗ್ರಹಿಸಿ ಲೀಗ್‌ನಲ್ಲಿ ಎರಡನೇ ಸ್ಥಾನ ಪಡೆಯಿತು. ಬಾಂಗ್ಲಾದೇಶ ಇಷ್ಟೇ ಪಂದ್ಯಗಳಿಂದ 9 ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನಕ್ಕೇ ಏರಿತು. ಆತಿಥೇಯ ನೇಪಾಳ (3 ಪಾಯಿಂಟ್ಸ್) ಮೂರನೇ ಸ್ಥಾನಕ್ಕಿಳಿದರೆ, ಭೂತಾನ್ (0) ಕೊನೆಯ ಸ್ಥಾನದಲ್ಲಿ ಅಭಿಯಾನ ಮುಗಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.