ಫುಟ್‌ಬಾಲ್
ಹೈದರಾಬಾದ್: ಇಂಜುರಿ ಅವಧಿಯಲ್ಲಿ ಗಳಿಸಿದ ಗೋಲಿನ ನೆರವಿನಿಂದ ಪಶ್ಚಿಮ ಬಂಗಾಳ ತಂಡವು ಸಂತೋಷ್ ಟ್ರೋಫಿಗಾಗಿ ನಡೆದ 78ನೇ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ 1–0ಯಿಂದ ಕೇರಳವನ್ನು ಮಣಿಸಿ ದಾಖಲೆಯ 33ನೇ ಬಾರಿ ಕಿರೀಟವನ್ನು ಮುಡಿಗೇರಿಸಿಕೊಂಡಿತು.
ಗಚಿಬೌಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರೋಚಕ ಹಣಾಹಣಿಯಲ್ಲಿ 90+4ನೇ ನಿಮಿಷದಲ್ಲಿ ಬಂಗಾಳದ ರಾಬಿ ಹನ್ಸ್ಡಾ ಅಮೋಘ ರೀತಿಯಲ್ಲಿ ಚೆಂಡನ್ನು ಗುರಿ ಸೇರಿಸಿ ಗೆಲುವಿನ ರೂವಾರಿಯಾದರು. ಈ ಮೂಲಕ ಆರು ವರ್ಷಗಳ ಬಳಿಕ ಮತ್ತೆ ಪಶ್ಚಿಮ ಬಂಗಾಳ ಚಾಂಪಿಯನ್ ಆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.