ADVERTISEMENT

ಸೌದಿಯ ಶಹರಾನಿಗೆ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 18:45 IST
Last Updated 24 ನವೆಂಬರ್ 2022, 18:45 IST
ಸೌದಿಯ ಅಲ್ ಶಹರಾನಿ ಗಾಯಗೊಂಡ ಸಂದರ್ಭ  –ಎಎಫ್‌ಪಿ ಚಿತ್ರ
ಸೌದಿಯ ಅಲ್ ಶಹರಾನಿ ಗಾಯಗೊಂಡ ಸಂದರ್ಭ  –ಎಎಫ್‌ಪಿ ಚಿತ್ರ   

ರಿಯಾದ್(ಎಎಫ್‌ಪಿ): ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಸೌದಿ ಅರೇಬಿಯಾ ತಂಡದ ಡಿಫೆಂಡರ್ ಯಾಸಿರ್ ಅಲ್ ಶಹರಾನಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಪಂದ್ಯದಲ್ಲಿ ಯಾಸಿರ್ ಅವರು ಇನ್ನೊಬ್ಬ ಆಟಗಾರನಿಗೆ ಡಿಕ್ಕಿ ಹೊಡೆದಿದ್ದರು. ಆಗ ಅವರ ತಲೆಗೆ ಬಲವಾದ ಪೆಟ್ಟು ಬಿದ್ದು ಕುಸಿದಿದ್ದರು.

‘ಅವರ ಆರೋಗ್ಯ ಸ್ಥಿರವಾಗಿದೆ. ಎದೆ ಹಾಗೂ ತಲೆಗೆ ಪೆಟ್ಟು ಬಿದ್ದಿದ್ದು ಶಸ್ತ್ರಚಿಕಿತ್ಸೆ ನೀಡಲಾಗಿದೆ’ ಎಂದು ವೈದ್ಯರ ತಂಡದ ಮೂಲಗಳು ತಿಳಿಸಿವೆ. ಈ ಪಂದ್ಯದಲ್ಲಿ ಸೌದಿ ತಂಡವು ಅರ್ಜೆಂಟೀನಾಗೆ ಸೋಲಿನ ಆಘಾತ ನೀಡಿತ್ತು.

ADVERTISEMENT

ಡೆನ್ಮಾರ್ಕ್‌ನ ಥಾಮಸ್‌ ಡೆಲನೇಗೆ ಗಾಯ; ದೋಹಾ (ರಾಯಿಟರ್ಸ್): ಡೆನ್ಮಾರ್ಕ್ ತಂಡದ ಮಿಡ್‌ಫೀಲ್ಡರ್ ಥಾಮಸ್ ಡೆಲನೇ ಅವರ ಮೊಣಕಾಲಿಗೆ ಗಂಭೀರ ಗಾಯವಾಗಿದ್ದು ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಡಿ ಗುಂಪಿನಲ್ಲಿ ಟ್ಯುನಿಷಿಯಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಅವರ ಮೊಣಕಾಲಿಗೆ ಪೆಟ್ಟಾಗಿತ್ತು. ಅವರಿಗೆ ನಾಲ್ಕು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.