ಫುಟ್‌ಬಾಲ್
ಬೆಂಗಳೂರು: ಸ್ಟೇಡಿಯಂ ಎಫ್‌ಸಿ ತಂಡವು ಕೆಎಸ್‌ಎಫ್‌ಎ ಸಿ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಅನ್‌ಡಿಸ್ಪುಟೆಡ್ ತಂಡದ ವಿರುದ್ಧ 4–0 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿತು.
ಅಶೋಕನಗರದ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಟೇಡಿಯಂ ಎಫ್‌ಸಿ ಪರ ಆಕರ್ಷ್ ಕಾರುತುರಿ (8ನೇ, 18ನೇ ನಿ.), ಜಿಯಾಮ್ ಅಹಮದ್ (32ನೇ ನಿ.) ಮತ್ತು ವಿವೇಕ್ ಕುಮಾರ್ (42ನೇ ನಿ.) ಗೋಲು ಹೊಡೆದರು.
ಇನ್ನೊಂದು ಪಂದ್ಯದಲ್ಲಿ ಲಾ ಎಸ್ಪೆರ್‌ನ್ಜಾ ತಂಡ 2–2 ಗೋಲುಗಳಿಂದ ಬಿಎನ್‌ಎಫ್‌ಸಿ ತಂಡವನ್ನು ಮಣಿಸಿತು. ಎಸ್ಪೆರ್‌ನ್ಜಾ ಪರ ಜೆರೊಮ್ (44ನೇ ನಿ. 52 ನೇ ನಿ.) ಮತ್ತು ಬಿಎನ್‌ಎಫ್‌ಸಿ ಪರ ಪ್ರಣವ್ (14ನೇ, 34ನೇ ನಿ.) ಗೋಲು ಹೊಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.