ADVERTISEMENT

ಕ್ರೊವೇಷ್ಯಾ ಮಾಜಿ ಕೋಚ್‌ ಸ್ಟಿಮ್ಯಾಚ್‌ಗೆ ಭಾರತ ಫುಟ್‌ಬಾಲ್ ತಂಡದ ತರಬೇತಿ ಹೊಣೆ

​ಪ್ರಜಾವಾಣಿ ವಾರ್ತೆ
Published 16 ಮೇ 2019, 3:07 IST
Last Updated 16 ಮೇ 2019, 3:07 IST
ಇಗೊರ್ ಸ್ಟಿಮ್ಯಾಕ್‌ 
ಇಗೊರ್ ಸ್ಟಿಮ್ಯಾಕ್‌    

ನವದೆಹಲಿ (ಪಿಟಿಐ): ಕ್ರೊವೇಷ್ಯಾ ಫುಟ್‌ಬಾಲ್ ತಂಡದ ಮಾಜಿ ಕೋಚ್‌ ಇಗೊರ್‌ ಸ್ಟಿಮ್ಯಾಚ್ ಅವರು ಭಾರತ ಫುಟ್‌ಬಾಲ್‌ ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಭಾರತ ತಂಡ ಏಷ್ಯಾಕಪ್‌ ಟೂರ್ನಿಯಿಂದ ಹೊರಬಿದ್ದ ಬಳಿಕ, ಆಗ ಕೋಚ್ ಆಗಿದ್ದಸ್ಟೀಫನ್‌ ಕಾನ್‌ಸ್ಟಂಟೈನ್‌ಹುದ್ದೆ ತೊರೆದಿದ್ದರು. ಆ ಸ್ಥಾನಕ್ಕಾಗಿ ಕೆಲವು ದಿನಗಳಿಂದ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಇದೀಗ ಊಹಾಪೋಹಗಳಿಗೆ ತೆರೆಬಿದ್ದಂತಾಗಿದೆ.

‘ರಾಷ್ಟ್ರೀಯ ತಂಡದ ಕೋಚ್‌ ಹುದ್ದೆಗೆ ಸ್ಟಿಮ್ಯಾಚ್ ಸೂಕ್ತ ಆಯ್ಕೆ. ಭಾರತ ತಂಡ ಬದಲಾವಣೆ ಕಾಣುತ್ತಿದೆ. ಅವರ ಅಪಾರ ಅನುಭವವು ತಂಡದ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಅಧ್ಯಕ್ಷ ಪ್ರಫುಲ್‌ ಪಟೇಲ್‌ ಹೇಳಿದ್ದಾರೆ.

ADVERTISEMENT

2014ರ ಬ್ರೆಜಿಲ್‌ ವಿಶ್ವಕಪ್‌ಗೆ ನಡೆದ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಕ್ರೊವೇಷ್ಯಾ ತಂಡವನ್ನು ಸ್ಟಿಮ್ಯಾಚ್ ಕೋಚ್ ಆಗಿ ಮುನ್ನಡೆಸಿದ್ದರು. ಭಾರತ ತಂಡಕ್ಕೆ ಆಯ್ಕೆಯಾಗುವ ಮೊದಲು ಕತಾರ್‌ನ ಅಲ್‌–ಶಹಾನಿಯಾ ಫುಟ್‌ಬಾಲ್‌ ಕ್ಲಬ್‌ಗೆ ಅವರು ತರಬೇತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.