ADVERTISEMENT

ಸ್ಯಾಫ್‌ ಚಾಂಪಿಯನ್‌ಷಿಪ್‌: ತಂಡಕ್ಕೆ ಮರಳಿದ ಉದಾಂತ್‌

23 ಆಟಗಾರರ ಭಾರತ ತಂಡ ಪ್ರಕಟ: ಮಾಲ್ಟೀವ್ಸ್‌ನಲ್ಲಿ ಅ.1ರಿಂದ ಟೂರ್ನಿ

ಪಿಟಿಐ
Published 26 ಸೆಪ್ಟೆಂಬರ್ 2021, 13:49 IST
Last Updated 26 ಸೆಪ್ಟೆಂಬರ್ 2021, 13:49 IST
ಉದಾಂತ್‌ ಸಿಂಗ್‌
ಉದಾಂತ್‌ ಸಿಂಗ್‌   

ನವದೆಹಲಿ: ಮಾಲ್ಟೀವ್ಸ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಸ್ಯಾಫ್‌ ಚಾಂಪಿಯನ್‌ಷಿಪ್‌ಗೆ ಭಾರತ ಫುಟ್‌ಬಾಲ್ ತಂಡವನ್ನು ಭಾನುವಾರ ಪ್ರಕಟಿಸಲಾಗಿದೆ. ಐಎಸ್‌ಎಲ್‌ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿಯಲ್ಲಿ ಆಡುವ ಉದಾಂತ್‌ ಸಿಂಗ್‌ ತಂಡಕ್ಕೆ ಮರಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ನೇಪಾಳ ಎದುರು ನಡೆದ ಎರಡು ಸ್ನೇಹಪರ ಪಂದ್ಯಗಳಲ್ಲಿ ಉದಾಂತ್ ಆಡಿರಲಿಲ್ಲ. ಸ್ಯಾಫ್‌ ಚಾಂಪಿಯನ್‌ಷಿಪ್‌ ಅಕ್ಟೋಬರ್ 1ರಿಂದ 16ರವರೆಗೆ ನಡೆಯಲಿದೆ.

ಗೋಲ್‌ಕೀಪರ್‌ ವಿಶಾಲ್‌ ಕೈಥ್‌ ಸ್ಥಾನ ಗಳಿಸಿದ್ದರೆ, ಧೀರಜ್ ಸಿಂಗ್‌ ಮೊಯಿರಂಗ್‌ದೆಮ್ ಅವರನ್ನು ಕೈಬಿಡಲಾಗಿದೆ.

ADVERTISEMENT

ಎಲ್ಲ ಆಟಗಾರರು ಹಾಗೂ ನೆರವು ಸಿಬ್ಬಂದಿ ಬೆಂಗಳೂರಿನಲ್ಲಿ ಸೋಮವಾರ ಸೇರಲಿದ್ದು, ಮರುದಿನ ಮಾಲ್ಡೀವ್ಸ್‌ ವಿಮಾನ ಏರಲಿದ್ದಾರೆ. ಅಕ್ಟೋಬರ್‌ 4ರಂದು ಮೊದಲ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ಆಡಲಿದೆ.

ಭಾರತ ತಂಡವು ಏಳು ಬಾರಿ ಸ್ಯಾಫ್‌ ಕಪ್‌ ಚಾಂಪಿಯನ್‌ ಆಗಿದೆ. 1993 (ಲಾಹೋರ್‌), 1997 (ಕಠ್ಮಂಡು), 1999 (ಮಡಗಾಂವ್‌), 2005 (ಕರಾಚಿ), 2009 (ಢಾಕಾ, 23 ವರ್ಷದೊಳಗಿನವರ ತಂಡ) ಮತ್ತು 2011ರಲ್ಲಿ (ನವದೆಹಲಿ) ನಡೆದ ಟೂರ್ನಿಗಳಲ್ಲಿ ಕಿರೀಟ ಧರಿಸಿತ್ತು.

ಭಾರತ ತಂಡ ಇಂತಿದೆ: ಗೋಲ್‌ಕೀಪರ್ಸ್‌: ಗುರುಪ್ರೀತ್ ಸಿಂಗ್‌, ಅಮರಿಂದರ್ ಸಿಂಗ್‌, ವಿಶಾಲ್‌ ಕೈಥ್‌.

ಡಿಫೆಂಡರ್ಸ್‌: ಪ್ರೀತಮ್ ಕೊಟಲ್‌, ಸೆರಿಟನ್ ಫರ್ನಾಂಡಿಸ್‌, ಚಿಂಗ್ಲೆನ್ಸನಾ ಸಿಂಗ್‌, ರಾಹುಲ್ ಭೆಕೆ, ಸುಭಶೀಶ್‌ ಬೋಸ್‌, ಮಂದಾರ್ ರಾವ್ ದೇಸಾಯಿ.

ಮಿಡ್‌ಫೀಲ್ಡರ್ಸ್‌: ಉದಾಂತ್‌ ಸಿಂಗ್‌, ಬ್ರೆಂಡನ್ ಫರ್ನಾಂಡಿಸ್‌, ಲಲೆಂಗ್‌ಮಾವಿಯಾ, ಅನಿರುದ್ಧ ಥಾಪಾ, ಸಹಲ್ ಅಬ್ದುಲ್ ಸಮದ್‌, ಜೀಕ್‌ಸನ್ ಸಿಂಗ್‌, ಗ್ಲೆನ್‌ ಮಾರ್ಟಿನ್ಸ್, ಸುರೇಶ್ ಸಿಂಗ್‌, ಲಿಸ್ಟನ್ ಕೊಲಾಸೊ, ಯಾಸಿರ್ ಮೊಹಮ್ಮದ್.

ಫಾರ್ವರ್ಡ್ಸ್: ಮನವೀರ್‌ ಸಿಂಗ್‌, ರಹೀಂ ಅಲಿ, ಸುನಿಲ್ ಚೆಟ್ರಿ, ಫಾರೂಕ್ ಚೌಧರಿ.

ಗುಂಪು ಹಂತದಲ್ಲಿ ಭಾರತದ ಪಂದ್ಯಗಳು

ದಿನಾಂಕ;ಎದುರಾಳಿ;ಸಮಯ (ಭಾರತೀಯ ಕಾಲಮಾನ)

ಅ.4;ಬಾಂಗ್ಲಾದೇಶ;ಸಂಜೆ 4.30

ಅ.7;ಶ್ರೀಲಂಕಾ;ಸಂಜೆ 4.30

ಅ.10;ನೇಪಾಳ;ರಾತ್ರಿ 8.30‌

ಅ.13;ಮಾಲ್ಡೀವ್ಸ್;ರಾತ್ರಿ 8.30‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.