ಬೆಂಗಳೂರು: ಆತಿಥೇಯ ಕರ್ನಾಟಕ ತಂಡವು ಕೆಎಸ್‌ಎಫ್‌ಎ ಶ್ರೇಣಿ 1 ಸಬ್ ಜೂನಿಯರ್ ಬಾಲಕರ ಎನ್‌ಎಫ್‌ಸಿ ಫುಟ್‌ಬಾಲ್ ಟೂರ್ನಿಯಲ್ಲಿ 2–2 ಗೋಲುಗಳಿಂದ ಪಂಜಾಬ್ ವಿರುದ್ಧ ಡ್ರಾ ಸಾಧಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಕರ್ನಾಟಕದ ಪರ ಸಿ.ಎಚ್. ಸಾಕಿಪ್ (14ನೇ ನಿಮಿಷ) ಮತ್ತು ಇ. ಸಂತೋಷ್ (74ನೇ ನಿ.) ಗೋಲು ಗಳಿಸಿದರು. ಪಂಜಾಬ್ ಪರ ಭರತ್ ಕುಮಾರ್ (44 ಮತ್ತು 63ನೇ ನಿ) ಚೆಂಡನ್ನು ಗುರಿ ಸೇರಿಸಿದರು.
ಸಿ ಗುಂಪಿನ ಪಂದ್ಯದಲ್ಲಿ ಮಿಜೋರಾಂ ತಂಡವು 9–1ಗೋಲುಗಳಿಂದ ಒಡಿಶಾ ತಂಡವನ್ನು ಸೋಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.