ADVERTISEMENT

ದೇಶದ ಪರ ಆಡುವುದು ಗೌರವದ ಸಂಗತಿ: ಸುನಿಲ್‌ ಚೆಟ್ರಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 20:34 IST
Last Updated 15 ಜನವರಿ 2020, 20:34 IST
ಸುನಿಲ್‌ ಚೆಟ್ರಿ
ಸುನಿಲ್‌ ಚೆಟ್ರಿ   

ಬೆಂಗಳೂರು: ದೇಶದ ಪರ ಆಡುವುದು ಅತ್ಯಂತ ಗೌರವದ ಸಂಗತಿ ಎಂದು ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಹೇಳಿದ್ದಾರೆ. ನಗರದಲ್ಲಿ ಮಂಗಳವಾರ ರಾತ್ರಿ ನಡೆದ ‘ಕಿಂಗ್‌ಫಿಶರ್‌ ಶೂಟೌಟ್‌ ವಿಥ್‌ ಬೆಂಗಳೂರು ಎಫ್‌ಸಿ ಸ್ಟಾರ್ಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವೈಯಕ್ತಿಕವಾಗಿ ಗರಿಷ್ಠ ಗೋಲು ಗಳಿಕೆಗಿಂತ ತಂಡದ ಹಿತಕ್ಕಾಗಿ ಆಡುವುದು ಮುಖ್ಯ. ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಪರ ಆಡುತ್ತಿರುವುದೂ ಹೆಮ್ಮೆಯ ವಿಷಯ. ಇಲ್ಲಿನ ಅಭಿಮಾನಿಗಳ ಪ್ರೋತ್ಸಾಹ ಅಪಾರ’ ಎಂದು ಚೆಟ್ರಿ ನುಡಿದರು.

‘ಫುಟ್‌ಬಾಲ್‌ನಲ್ಲಿ ಮಾನಸಿಕ ಸವಾಲುಗಳಿಗಿಂತ ದೈಹಿಕ ಕ್ಷಮತೆಗೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ’ ಎಂದು ಇದೇ ವೇಳೆ ಚೆಟ್ರಿ ಹೇಳಿದರು.

ADVERTISEMENT

ಸಾಮಾಜಿಕ ಜಾಲತಾಣಗಳ ಮೂಲಕ ಆಯ್ಕೆ ಮಾಡಲಾದ ಅಭಿಮಾನಿಗಳಿಗೆ ಬಿಎಫ್‌ಸಿ ಆಟಗಾರರೊಡನೆ ‘ಪೆನಾಲ್ಟಿ ಶೂಟೌಟ್‌’ ಆಡುವ ಅವಕಾಶ ನೀಡಲಾಗಿತ್ತು. ಅಭಿಮಾನಿಗಳು ತಂಡದ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಅವರನ್ನು ‘ಬೀಟ್‌’ ಮಾಡಿ ಗೋಲು ಗಳಿಸಬೇಕಿತ್ತು. ಗೋಲು ಗಳಿಸಿದವರು ಬಿಎಫ್‌ಸಿ ಬೆಂಗಳೂರಿನಲ್ಲಿ ಆಡುವ ಪಂದ್ಯಗಳಿಗೆ ಪಾಸ್‌ ಪಡೆದರು.

ಬಿಎಫ್‌ಸಿ ತಂಡದ ಜುವಾನನ್‌ ಗೊಂಜಾಲೆಜ್‌ ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.