
ಫುಟ್‌ಬಾಲ್
ಫತೋರ್ಡಾ: ದೇಶೀಯ ಪಂದ್ಯಗಳ ಅಭ್ಯಾಸವಿಲ್ಲದೇ ಭಾರತದ ಫುಟ್‌ಬಾಲ್ ಕ್ಲಬ್‌ಗಳು ಸೊರಗಿದ್ದವು. ಈಗ, ಶನಿವಾರ ಆರಂಭವಾಗುವ ಸೂಪರ್ ಕಪ್ ಟೂರ್ನಿಯು ಐಎಸ್‌ಎಲ್ ಕ್ಲಬ್‌ಗಳಿಗೆ ಸಾಕಷ್ಟು ನೆರವಾಗಲಿದೆ.
ಸೂಪರ್ ಕಪ್ ಚಾಂಪಿಯನ್ ತಂಡವು ಎಎಫ್‌ಸಿ ಚಾಂಪಿಯನ್ಸ್ ಲೀಗ್ ಪೂರ್ವಭಾವಿ ಹಂತದಲ್ಲಿ ಆಡುವ ಅರ್ಹತೆ ಗಳಿಸಲಿದೆ.
ಸಾಂಪ್ರದಾಯಿಕವಾಗಿ ಋತುವಿನ ಕೊನೆಯಲ್ಲಿ ಈ ಟೂರ್ನಿಯು ಭುವನೇಶ್ವರದಲ್ಲಿ ನಡೆಯುತ್ತಿತ್ತು. ಆದರೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಮತ್ತು ಅದರ ವಾಣಿಜ್ಯ ಪಾಲುಗಾರರ ನಡುವಣ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ದೇಶೀಯ ಫುಟ್‌ಬಾಲ್ ವೇಳಾಪಟ್ಟಿ ಅನಿಶ್ಚಿತವಾಗಿದ್ದು, ಟೂರ್ನಿಯನ್ನು ಗೋವಾಕ್ಕೆ ಸ್ಥಳಾಂತರಿಸಲಾಗಿದೆ.
ಬ್ಯಾಂಬೊಲಿಮ್‌ನಲ್ಲಿ ನಡೆಯಲಿರುವ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಕೋಲ್ಕತ್ತದ ಈಸ್ಟ್ ಬೆಂಗಾಲ್, ಗೋವಾದ ಡೆಂಪೊ ತಂಡವನ್ನು ಎದುರಿಸಲಿದೆ. ನಂತರ ನೆಹರೂ ಕ್ರೀಡಾಂಗಣದಲ್ಲಿ ಮೋಹನ್ ಬಾಗನ್ ತಂಡವು, ಚೆನ್ನೈಯಿನ್ ಎಫ್‌ಸಿ ತಂಡವನ್ನು ಎದುರಿಸಲಿದೆ.
16 ತಂಡಗಳು ಕಣದಲ್ಲಿವೆ. ಇದರಲ್ಲಿ 12 ಐಎಸ್‌ಎಲ್ ತಂಡಗಳೂ ಇವೆ. ಒಡಿಶಾ ಎಫ್‌ಸಿ ಮಾತ್ರ ಭಾಗವಹಿಸುತ್ತಿಲ್ಲ. ಜೊತೆಗೆ ಐ ಲೀಗ್‌ನ ನಾಲ್ಕು ತಂಡಗಳೂ ಸೆಣಸಾಡಲಿವೆ. ಫೈನಲ್ ನವೆಂಬರ್ 22ರಂದು ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.