ADVERTISEMENT

ಬಿಡಿಎಫ್‌ಎ ಸೂಪರ್ ಡಿವಿಷನ್‌ ಲೀಗ್‌ ಫುಟ್‌ಬಾಲ್‌: ರಿಯಲ್‌ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 16:11 IST
Last Updated 25 ಅಕ್ಟೋಬರ್ 2024, 16:11 IST
ರಿಯಲ್‌ ಬೆಂಗಳೂರು ತಂಡದ ಸೈಯದ್‌ ಅಹಮ್ಮದ್‌ ಮತ್ತು ಬಿಯುಎಫ್‌ಸಿ ತಂಡದ ಗೋವರ್ಧ ದಾಸ್ ಅವರು ಚೆಂಡಿಗಾಗಿ ಸೆಣಸಾಟ ನಡೆಸಿದರು –ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ದನ್
ರಿಯಲ್‌ ಬೆಂಗಳೂರು ತಂಡದ ಸೈಯದ್‌ ಅಹಮ್ಮದ್‌ ಮತ್ತು ಬಿಯುಎಫ್‌ಸಿ ತಂಡದ ಗೋವರ್ಧ ದಾಸ್ ಅವರು ಚೆಂಡಿಗಾಗಿ ಸೆಣಸಾಟ ನಡೆಸಿದರು –ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ದನ್   

ಬೆಂಗಳೂರು: ಸಾಂಘಿಕ ಆಟ ಪ್ರದರ್ಶಿಸಿದ ರಿಯಲ್‌ ಬೆಂಗಳೂರು ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ 2–0 ಗೋಲುಗಳಿಂದ ಬೆಂಗಳೂರು ಯುನೈಟೆಡ್‌ ಎಫ್‌ಸಿ ತಂಡವನ್ನು ಸೋಲಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಿಯಲ್‌ ತಂಡದ ಪರ ಆರ್.ಕಾರ್ತಿಕೇಯನ್ (24ನೇ ನಿ.) ಮತ್ತು ಸೈಯದ್ ಅಹಮ್ಮದ್‌ (90+1ನೇ) ತಲಾ ಒಂದು ಗೋಲು ಗಳಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಎಚ್‌ಎಎಲ್‌ ಎಫ್‌ಸಿ ತಂಡವು 2–1 ಗೋಲುಗಳಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡವನ್ನು ಮಣಿಸಿತು. ಎಚ್‌ಎಎಲ್‌ ಪರ ಲಕ್ಪಾ ನಾರ್ಬು ಶೆರ್ಪಾ (29ನೇ) ಮತ್ತು ತೇಜಸ್ ಎಸ್. (90+7ನೇ) ಗೋಲು ಗಳಿಸಿದರು. ಸಬರಿನ್ ಬುಷ್ (58ನೇ) ಕಿಕ್‌ಸ್ಟಾರ್ಟ್‌ ಪರ ಏಕೈಕ ಗೋಲು ತಂದಿತ್ತರು.

ADVERTISEMENT

ಶನಿವಾರ ಪಂದ್ಯಕ್ಕೆ ಬಿಡುವು ದಿನವಾಗಿದ್ದು, ಭಾನುವಾರ ಎಫ್‌ಸಿ ಬೆಂಗಳೂರು ಯುನೈಟೆಡ್‌–  ಎಫ್‌ಸಿ ಅಗ್ನಿಪುತ್ರ ಹಾಗೂ ಎಎಸ್‌ಸಿ ಅಂಡ್‌ ಸೆಂಟರ್‌ – ಎಂಇಜಿ ಅಂಡ್‌ ಸೆಂಟರ್‌ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.