ADVERTISEMENT

ಸೂಪರ್ ಡಿವಿಷನ್‌ ಲೀಗ್ ಪುಟ್‌ಬಾಲ್‌ ಲೀಗ್: ಎಫ್‌ಸಿ ಅಗ್ನಿಪುತ್ರ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 15:41 IST
Last Updated 3 ಜನವರಿ 2025, 15:41 IST
ಎಫ್‌ಸಿ ರಿಯಲ್‌ ಬೆಂಗಳೂರು ತಂಡದ ಸೋಮ್ಯಾ ತಮ್ತಾ (ಎಡ) ಮತ್ತು ಎಫ್‌ಸಿ ಅಗ್ನಿಪುತ್ರ ತಂಡದ ಅಜ್ಫರ್‌ ನೋರಾನಿ (ಬಲ) ಚೆಂಡಿಗಾಗಿ ಪೈಪೋಟಿ ನಡೆಸಿದರು -ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌
ಎಫ್‌ಸಿ ರಿಯಲ್‌ ಬೆಂಗಳೂರು ತಂಡದ ಸೋಮ್ಯಾ ತಮ್ತಾ (ಎಡ) ಮತ್ತು ಎಫ್‌ಸಿ ಅಗ್ನಿಪುತ್ರ ತಂಡದ ಅಜ್ಫರ್‌ ನೋರಾನಿ (ಬಲ) ಚೆಂಡಿಗಾಗಿ ಪೈಪೋಟಿ ನಡೆಸಿದರು -ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌    

ಬೆಂಗಳೂರು: ರಾಹುಲ್‌ ಕೆ.ಪಿ. ಗಳಿಸಿದ ಎರಡು ಗೋಲುಗಳ ನೆರವಿನಿಂದ ಎಫ್‌ಸಿ ಅಗ್ನಿಪುತ್ರ ತಂಡ ಸೂಪರ್‌ ಡಿವಿಷನ್ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ 3–2 ಗೋಲುಗಳಿಂದ ಎಫ್‌ಸಿ ರಿಯಲ್‌ ಬೆಂಗಳೂರು ತಂಡವನ್ನು ಮಣಿಸಿತು.

ಅಶೋಕನಗರದ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಅಗ್ನಿಪುತ್ರ ತಂಡದ ಅಜ್ಫರ್‌ ನೂರಾನಿ (48ನೇ ನಿಮಿಷ) ಮತ್ತು ರಾಹುಲ್‌ (78, 90ನೇ ನಿ) ಗೋಲುಗಳನ್ನು ಹೊಡೆದರು. ರಿಯಲ್‌ ತಂಡದ ಪರ ಸಯ್ಯದ್‌ ಅಹಮದ್‌ (22 ನಿ.), ಸೋಮ್ಯಾ ತಮ್ತಾ (57ನೇ ನಿ.) ತಲಾ ಒಂದೊಂದು ಗೋಲು ಬಾರಿಸಿದರು. 

ಇನ್ನೊಂದು ಪಂದ್ಯದಲ್ಲಿ ಎಚ್‌ಎಎಲ್‌ ಎಫ್‌ಸಿ ತಂಡ 2–0 ಗೋಲುಗಳಿಂದ ಎಂಎಫ್‌ಎಆರ್‌ ತಂಡವನ್ನು ಸೋಲಿಸಿತು. ಎಚ್‌ಎಎಲ್‌ ಎಫ್‌ಸಿ ತಂಡದ ಲಕ್ಪಾ ನಾರ್ಬು ಶೆರ್ಪಾ (11 ಮತ್ತು 38ನೇ ನಿಮಿಷ) ಎರಡು ಗೋಲು ಹೊಡೆದರು. 

ADVERTISEMENT

ಜೂನೊ ತಂಡಕ್ಕೆ ಗೆಲುವು: ಸಾಯ್‌ ಮೈದಾನದಲ್ಲಿ ನಡೆಯುತ್ತಿರುವ ಬಿ ಡಿವಿಷನ್‌ ಲೀಗ್‌ನ ಪಂದ್ಯದಲ್ಲಿ ಜೂನೊ ಎಫ್‌ಸಿ ತಂಡ 5–0 ಗೋಲುಗಳಿಂದ ಅಲ್‌ ಫತೇಹ ಎಫ್‌ಸಿ ತಂಡವನ್ ಪರಾಭವಗೊಳಿಸಿತು.

ಜೂನೊ ಎಫ್‌ಸಿ ತಂಡದ ಪೃಥ್ವಿ ಜಿ. (16ನೇ ನಿ), ಅನಗೊಮ್‌ ಸೇತಾಮ್‌ ಸಿಂಗ್‌ (35+1ನೇ ನಿ), ತೌಣಾಜಾನ್‌ ಪ್ರೇಮ್‌ ಕಿಶನ್‌ ಸಿಂಗ್‌ (56, 70ನೇ ನಿ) ಮತ್ತು ಮಹೇಶ್‌ ಎಂ. (69ನೇ ನಿ) ಚೆಂಡನ್ನು ಗುರಿ ಸೇರಿಸಿದರು.  

ಎರಡನೇ ಪಂದ್ಯದಲ್ಲಿ ಬೆಳಗಾವಿ ಎಫ್‌ಸಿ 1–0 ಗೋಲುಗಳಿಂದ ಎಡಿಇ ಎಫ್‌ಸಿ ತಂಡವನ್ನು ಸೋಲಿಸಿತು. ಬೆಳಗಾವಿ ಎಫ್‌ಸಿ ತಂಡದ ಮಯೂರ್‌ ರಮೇಶ್‌ ಪಾಲೆಕರ್‌ (70ನೇ ನಿ) ಗೋಲು ಹೊಡೆದರು. 

ಮೂರನೇ ಪಂದ್ಯದಲ್ಲಿ ಮೊಹಮ್ಮಡನ್‌ ಸ್ಪೊರ್ಟಿಂಗ್‌ ಎಫ್‌ಸಿ 5–1 ಗೋಲುಗಳಿಂದ ಬೆಂಗಳೂರು ವಾರಿಯರ್ಸ್‌ ತಂಡದ ವಿರುದ್ಧ ಸುಲಭ ಗೆಲುವು ಸಾಧಿಸಿತು. ಸ್ಪೋರ್ಟಿಂಗ್‌ ತಂಡದ ಸಮರ್ಥ್‌ ಎಸ್‌. ಬಾಂಡೇಕರ್‌ (5ನೇ ಮತ್ತು 32ನೇ ನಿಮಿಷ), ಟಿ. ರೋಹಿತ್‌ ಸಿಂಗ್‌ (15ನೇ ನಿ), ಶೀದ್‌ ಕೆ. ಮುಜಾವರ್‌ (49ನೇ ನಿ), ಕೈಫ್‌ ಅಬ್ದುಲ್ಲಾಜೀಜ್‌ ಶೇಖ್‌ (51ನೇ ನಿ) ಗೋಲು ಬಾರಿಸಿದರು. ವಾರಿಯರ್ಸ್‌ನ ಭಾರತಿ ಎಂ. (34ನೇ ನಿಮಿಷ) ಏಕೈಕ ಗೋಲು ಹೊಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.