ADVERTISEMENT

ಫುಟ್‌ಬಾಲ್‌: ಥಾಂಕೋಸ್‌ ಯೂನಿಯನ್‌ ಜಯಭೇರಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 13:26 IST
Last Updated 5 ಜನವರಿ 2022, 13:26 IST
ಥಾಂಕೋಸ್ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿಯ ಸುಬಿನ್ ರಾಜ್‌ (ಎಡ) ಮತ್ತು ಯಂಗ್ ಚಾಲೆಂಜರ್ಸ್‌ನ ಜೊಯೆಲ್ ಕೆವಿನ್ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ
ಥಾಂಕೋಸ್ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿಯ ಸುಬಿನ್ ರಾಜ್‌ (ಎಡ) ಮತ್ತು ಯಂಗ್ ಚಾಲೆಂಜರ್ಸ್‌ನ ಜೊಯೆಲ್ ಕೆವಿನ್ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಥಾಂಕೋಸ್ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ತಂಡ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಗೆಲುವು ಸಾಧಿಸಿತು. ಬುಧವಾರ ನಡೆದ ಪಂದ್ಯದಲ್ಲಿ ಯಂಗ್ ಚಾಲೆಂಜರ್ಸ್‌ ಎಫ್‌ಸಿ ತಂಡವನ್ನು ಥಾಂಕೋಸ್ 2–0ಯಿಂದ ಮಣಿಸಿತು.

ಆ್ಯಂಟೊ ಕ್ಸೇವಿಯರ್ 81ನೇ ನಿಮಿಷದಲ್ಲಿ ಮತ್ತು ಪೆಂಬಾ ರಾಯ್‌ 87ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ಬುಧವಾರ ನಡೆದ ಮಹಿಳಾ ಲೀಗ್‌ನ ಸ್ಲಾಮ್ಸರ್ಸ್‌ ಬೆಳಗಾಂ ಮತ್ತು ಬೆಂಗಳೂರು ಸಾಕರ್ ಗ್ಯಾಲಕ್ಸಿ ನಡುವಿನ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತು.

ADVERTISEMENT

ಗುರುವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್‌ ಮಹಿಳಾ ಎಫ್ಸಿ ಮತ್ತು ಪರಿಕ್ರಮ ಮಹಿಳಾ ಎಫ್‌ಸಿ ತಂಡಗಳು ಸೆಣಸಲಿವೆ.

ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಳಿಗ್ಗೆ 11. 45ಕ್ಕೆ ಎಎಸ್‌ಸಿ–ಸೆಂಟರ್ ಎಫ್‌ಸಿ ಮತ್ತು ಕಿಕ್‌ಸ್ಟಾರ್ಟ್‌ ಎಫ್‌ಸಿ, ಮಧ್ಯಾಹ್ನ 1.45ಕ್ಕೆ ಬಿಎಫ್‌ಸಿ ಮತ್ತು ಜವಾಹರ್ ಯೂನಿಯನ್ ಎಫ್‌ಸಿ ತಂಡಗಳು ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.